ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಇಟಾಲಿಯನ್ ಸಾಹಸ ಸವಾರಿ ‘ರಾಡಿಕ್ಸ್’ ಉದ್ಘಾಟನೆ
Update: 2025-12-24 20:19 IST
ಕಣ್ಣೂರು, ಡಿ.23: ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ಸಾಹಸ ಸವಾರಿ ‘ರಾಡಿಕ್ಸ್’ ಆರಂಭಗೊಂಡಿದೆ.
ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್ ಉಪಾಧ್ಯಕ್ಷ ಕೆ. ಸಂತೋಷ್, ವ್ಯವಸ್ಥಾಪಕ ನಿರ್ದೇಶಕ ಇ. ವೈಶಾಖ್ ಶುಭ ಹಾರೈಸಿದರು.
15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರೈಡ್ ಅನ್ನು ಇಟಾಲಿಯನ್ ಕಂಪೆನಿ ಮೋಸರ್ ತಯಾರಿಸಿದೆ. ಇಟಲಿಯಿಂದ ಆಗಮಿಸಿದ ತಜ್ಞರ ಮೇಲ್ವಿಚಾರಣೆಯಲ್ಲಿ ರೈಡ್‌ನ ಅಳವಡಿಕೆಯನ್ನು ಮಾಡಲಾಗಿದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಯ ಅಂಗವಾಗಿ, ವಿಸ್ಮಯ ಪಾರ್ಕ್‌ನಲ್ಲಿ ಸಂದರ್ಶಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.