ಪೆಟ್ರೋಲಿಯಂ ಸಂಸ್ಥೆಗಳ ಮಾಲಕರಿಗೆ ಸುಳ್ಳು ಕರೆ : ಜಾಗೃತರಾಗಿರಲು ಸೂಚನೆ
Update: 2026-01-16 22:05 IST
ಮಂಗಳೂರು,ಜ.16: ಪೆಟ್ರೋಲಿಯಂ ಸಂಸ್ಥೆಗಳ ನೋಂದಣಿ/ನವೀಕರಣ(ಲೈಸೆನ್ಸ್)ಗೆ ಸಂಬಂಧಿಸಿದಂತೆ ಶಿವರಾಜ್ ಎಂಬ ಹೆಸರಿನ ವ್ಯಕ್ತಿ (ದೂ.ಸಂ :8150816922) ನಾನು ಕಾರ್ಮಿಕ ಇಲಾಖೆ ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡು 11,700 ರೂ.ಫೋನ್ ಪೇ ಮಾಡಿ ಎಂದು ಕರೆ ಮಾಡಿದ್ದಲ್ಲದೆ ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗು ವುದೆಂದು ಪೆಟ್ರೋಲಿಯಂ ಸಂಸ್ಥೆಗಳ ಮಾಲಕರಿಗೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ದ.ಕ.ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಹಾಗೂ ಪ್ರಮುಖವಾಗಿ ಪೆಟ್ರೋಲಿಯಂ ಸಂಸ್ಥೆಗಳ ಮಾಲಕರು ಇಂತಹ ಕರೆಗಳು ಬಂದರೆ ಪ್ರತಿಕ್ರಿಯೆ ನೀಡಬಾರದು ಮತ್ತು ಸುಳ್ಳು ಕರೆಗಳಿಗೆ ಮೋಸ ಹೋಗಬಾರದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಕರೆಯನ್ನು ನಂಬಿ ಯಾವುದೇ ಆರ್ಥಿಕ ನಷ್ಟ ಉಂಟಾದರೆ ಇಲಾಖೆಯನ್ನು ದೂಷಿಸಬಾರದು. ಇಂತಹ ಕರೆ ಬಂದಲ್ಲಿ ಸೂಕ್ತ ದಾಖಲೆಯೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ.