×
Ad

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಶ್ವಾನ ‘ಜ್ಯೂಲಿ’ಗೆ ವಿದಾಯ; ʼರಿಯೊʼ ಆಗಮನ

Update: 2024-09-30 23:20 IST

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಶ್ವಾನ ತಂಡದಲ್ಲಿದ್ದ ಲ್ಯಾಬ್ರಡಾರ್ ಶ್ವಾನ ೮ರ ಹರೆಯದ ಜ್ಯೂಲಿ ನಿವೃತ್ತಿಯಾಗಿದ್ದು, ಜೂಲಿಯ ನಿರ್ಗಮನದ ಬೆನ್ನಲ್ಲೆ ತಂಡಕ್ಕೆ 11 ತಿಂಗಳ ಲ್ಯಾಬ್ರಡಾರ್ ಶ್ವಾನ ರಿಯೊ ಸೇರಿಕೊಂಡಿದೆ.

ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ, ಮತ್ತು ಇತರ ಅಧಿಕಾರಿಗಳು ಶ್ವಾನ ಜೂಲಿಯ ಅಚಲವಾದ ಸಮರ್ಪಣೆ ಮತ್ತು ನಿಷ್ಠೆಯನ್ನು ಗುರುತಿಸಿ ಮಾಲಾರ್ಪಣೆಗೈದರು. ನಿವೃತ್ತಿಯಾಗಿರುವ ಜ್ಯೂಲಿಯನ್ನು ಆಕೆಯ ಹ್ಯಾಂಡ್ಲರ್ ಸಿಐಎಸ್‌ಎಫ್ ಯೋಧ ಕುಮಾರ ದತ್ತು ಸ್ವೀಕರಿಸಿದ್ದಾರೆ.

ರಿಯೊಗೆ ರಾಂಚಿಯಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News