ಸ್ಪೀಕರ್ ಯು.ಟಿ. ಖಾದರ್, ಯು ಟಿ ಇಫ್ತಿಕಾರ್ ಗೆ ಬೀಳ್ಕೊಡುಗೆ
ಉಳ್ಳಾಲ: ಹಜ್ ಇಸ್ಲಾಮಿನ ಪಂಚ ಕಾರ್ಯಗಳಲ್ಲಿ ಒಂದಾಗಿದ್ದು, ಅರ್ಹತೆ ಇದ್ದವರಿಗೆ ಕಡ್ಡಾಯ ಆಗಿರುತ್ತದೆ. ಈ ಕಾರ್ಯ ನಿರ್ವಹಿಸಲು ನನಗೊಂದು ಅವಕಾಶ ಸಿಕ್ಕಿದೆ. ಇದಕ್ಕಾಗಿ ಅಲ್ಲಾಹನನ್ನು ಸ್ತುತಿಸುತ್ತೇನೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು
ಅವರು ಮುಡಿಪು ಹಾಗೂ ಉಳ್ಳಾಲ ಬ್ಲಾಕ್ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ನಾಗರಿಕರ ವತಿಯಿಂದ ಉಚ್ಚಿಲ ಖಾಸಗಿ ಸಭಾಂಗಣದಲ್ಲಿ ಪವಿತ್ರ ಹಜ್ ಯಾತ್ರೆ ತೆರಳಲಿರುವ ತಮಗೆ ಹಾಗೂ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯು ಟಿ ಇಫ್ತಿಕಾರ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಕ್ಬರ್ ಸಅದಿ ದುಆ ನೆರವೇರಿಸಿದರು. ಈ ಕಾರ್ಯಕ್ರಮ ದಲ್ಲಿ ಉಳ್ಳಾಲ ಬ್ಲಾಕ್ ನ ರಮೇಶ್ ಶೆಟ್ಟಿ ಬೋಳಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಡಿಪು ಬ್ಲಾಕ್ ನ ಪ್ರಶಾಂತ್ ಕಾಜವ, ಮುಸ್ತಫಾ ಅಬ್ದುಲ್ಲಾ, ಟಿ.ಎಸ್.ಅಬ್ದುಲ್ಲ, ಪ್ರಕಾಶ್ ಕುಂಪಲ, ನಗರಸಭೆ ಅಧ್ಯಕ್ಷೆ ಶಶಿಕಲಾ, ಕಣಚೂರು ಮೋನು, ದಿನೇಶ್ ರೈ, ಟಿ.ಎಸ್.ಅಬೂಬಕರ್, ಟಿ.ಕೆ.ಸುಧೀರ್, ಸದಾನಂದ ಶೆಟ್ಟಿ, ಶಾಹುಲ್ ಹಮೀದ್, ಸುರೇಶ್ ಭಟ್ನಗರ, ಎನ್ ಎಸ್ ಕರೀಮ್, ಅಬ್ಬಾಸ್ ಅಲಿ, ಇಬ್ರಾಹಿಂ ಹಾಜಿ ನಡುಪದವು,ನಾಸೀರ್ ಅಹ್ಮದ್ ಸಾಮಣಿಗೆ, ಮನ್ಸೂರ್ ಮಂಚಿಲ, ಜಲೀಲ್, ಅರುಣ್ ಡಿ ಸೋಜ, ಮುಸ್ತಫಾ ಹರೇಕಳ, ಮೊಹಮ್ಮದ್ ಮೋನು, ದೇವಕಿ ಉಳ್ಳಾಲ, ನಾಸೀರ್ ನಡುಪದವು, ಅಚ್ಯುತ ಗಟ್ಟಿ, ರಝಿಯ ಇಬ್ರಾಹಿಂ, ಎ.ಕೆ.ಅಬ್ದುಲ್ ರಹ್ಮಾನ್, ರವಿರಾಜ್ ಶೆಟ್ಟಿ, ಹಮೀದ್ ಕಿನ್ಯ, ಹಮೀದ್ ಹಸನ್ ಮಾಡೂರು, ಸಲಾಮ್ ಉಚ್ಚಿಲ, ನವನೀತ್ ಉಳ್ಳಾಲ ದೇವದಾಸ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿದರು.