ಹಿರಾ ಶಿಕ್ಷಣ ಸಂಸ್ಥೆಯಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ
ಮಂಗಳೂರು: ಹಿರಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಭೌತಿಕ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ. ಕಲಿಕೆ ಅನ್ನೋದು ಈ ಜೀವನಕ್ಕೆ ಮಾತ್ರವಲ್ಲ ಪರಲೋಕದಲ್ಲಿಯೂ ಇಂತಹ ಶಿಕ್ಷಣದಿಂದ ನಾವು ಜಯಶಾಲಿಯಾಗಬಹುದು ಎಂದು ಮೌಲ್ಯ ಶಿಕ್ಷಣದ ಮುಖ್ಯಸ್ಥರಾದ ಸೈಯದ್ ಶುಹೇಬ್ ಹುಸೈನಿ ನದ್ವಿ ಅವರು ಹೇಳಿದರು.
2023 -24ರ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಟಾಪರ್ ಹಾಗೂ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಹಿರಾ ವಿದ್ಯಾ ಸಂಸ್ಥೆಯ ಮುಹಮ್ಮದ್ ಸಿರಾಜುಲ್ ಹಸನ್ ಸಭಾಂಗಣದಲ್ಲಿ ಆಗಸ್ಟ್ 29 ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ಅಬ್ದುರ್ರಹಮಾನ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷ ಕೆ. ಎಂ. ಶರೀಫ್, ಅಧ್ಯಕ್ಷ ಎ. ಎಚ್. ಮಹಮೂದ್, ಕಾರ್ಯದರ್ಶಿ ಅಬ್ದುಲ್ ಕರೀಂ, ಸಂಚಾಲಕ ರಹಮತುಲ್ಲಾ, ಆಡಳಿತ ಅಧಿಕಾರಿ ಝಾಕಿರ್ ಹುಸೇನ್, ಟ್ರಸ್ಟಿಗಳಾದ ಉಮರ್ ಬಾವ , ಅಬ್ದುಲ್ ಖಾದರ್, ಹನೀಫ್, ಹಸನಬ್ಬ, ಶಾಲಾ ಪಿ ಆರ್ ಒ ನಿಝಾಮುದ್ದೀನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಹಮದ್ ಶರೀಫ್ ಮತ್ತು ಉಪಾಧ್ಯಕ್ಷ ಅಬ್ದುಲ್ ಸಲಾಂ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಹಿರಾ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಂಜುಳಾ ಕುಮಾರಿ ಸ್ವಾಗತಿಸಿದರು. ಹಿರಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಫಾತಿಮಾ ಮೆಹರೂನ್ ವಂದಿಸಿದರು. ಶಾಲಾ ಶಿಕ್ಷಕಿಯರಾದ ಹಲೀಮಾ ಜಝೀಲ ಹಾಗೂ ಅಸ್ರೀನ್ ಕಾರ್ಯಕ್ರಮ ನಿರೂಪಿಸಿದರು.