ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಶನ್ ಅಸ್ತಿತ್ವಕ್ಕೆ
Update: 2023-08-19 11:53 IST
ಚಂದ್ರಹಾಸ ಡಿ. ಶೆಟ್ಟಿ | ಹಂಝ ಬಸ್ತಿಕೋಡಿ
ಬಂಟ್ವಾಳ, ಆ.19: ತಾಲೂಕಿನ ಹೊಟೇಲ್ ಮಾಲಕರ ಸಂಘಟನೆ 'ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಶನ್ (BTHA)' ಅಸ್ತಿತ್ವಕ್ಕೆ ಬಂದಿದೆ.
ನೂತನ ಸಂಘಟನೆಯ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲಕ ಚಂದ್ರಹಾಸ ಡಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಆನಿಯಾ ದರ್ಬಾರ್ ಹೊಟೇಲ್ ಮಾಲಕ ಹಂಝ ಬಸ್ತಿಕೋಡಿ, ಉಪಾಧ್ಯಕ್ಷರಾಗಿ ನಾರಾಯಣ್ ಸಿ. ಪೆರ್ನೆ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈ, ಕೋಶಾಧಿಕಾರಿಯಾಗಿ ಬಿ.ಧರ್ಮೇಂದ್ರ ಬಂಟ್ವಾಳ ಆಯ್ಕೆಯಾಗಿದ್ದಾರೆ .
ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.