ಕುಕ್ಕಾಜೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಬಂಟ್ವಾಳ, ನ.2: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಅಧೀನದಲ್ಲಿರುವ ಎಸ್.ವೈ.ಎಸ್. ಕುಕ್ಕಾಜೆ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ಟಿ.ಆರ್.ಎಫ್.) ಮತ್ತು ಯೆನೆಪೊಯ ಆಯುರ್ವೇದ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ಕುಕ್ಕಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಜಿಪಂ ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್ ಶಿಬಿರವನ್ನು ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಟಿ.ಆರ್.ಎಫ್. ಅಧ್ಯಕ್ಷ ರಿಯಾಝ್ ಅಹ್ಮದ್, ಯೆನೆಪೊಯ ಆಯುರ್ವೇದ ಕಾಲೇಜಿನ ಡಾ.ಪ್ರದೀಪ್ ಕುಮಾರ್, ನ್ಯಾಚುರೋಪತಿ ಕಾಲೇಜಿನ ಡಾ.ಅರ್ಪಿತ್, ಮೆಡಿಕಲ್ ಕಾಲೇಜಿನ ಡಾ.ತಾರಿಕ್, ಯೆನೆಪೋಯ ಆಸ್ಪತ್ರೆ ಮೆಡಿಕಲ್ ಕ್ಯಾಂಪ್ ಸಂಯೋಜಕ ಅಬ್ದುರ್ರಝಾಕ್, ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್, ಎಸ್.ವೈಎಸ್. ಮಿತ್ತಬೈಲ್ ವಲಯ ಅಧ್ಯಕ್ಷ ಹಾಜಿ ಹನೀಫ್ ಮುಸ್ಲಿಯಾರ್, ವಿಟ್ಲ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಕುರುಂಬಳ, ಮದ್ರಸ ಮ್ಯಾನೇಜ್ಮೆಂಟ್ ಸಾಲೆತ್ತೂರು ಇದರ ಕಾರ್ಯದರ್ಶಿ ಆರಿಫ್ ಕರೈ, ಮ್ಯಾಕ್ಸ್ ಫೆರ್ನಾಂಡಿಸ್ ಮೆಸ್ಕಾಂ ವಿಟ್ಲ, ಕುಕ್ಕಾಜಿ ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷ ಅನ್ಸಾರ್ ನೋಳ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎ.ಅಬೂ ಸಿರಾಜ್ ಅಬೂಬಕರ್ ಮುಸ್ಲಿಯಾರ್ ದುಆಗೈದರು. ಟಿ.ಆರ್.ಎಫ್. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಡಿ. ಸ್ವಾಗತಿಸಿದರು. ಮುಹಮ್ಮದ್ ನಾಝಿಕ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಕುಕ್ಕಾಜೆ ಗ್ರಾಪಂ ಸದಸ್ಯ ಹಸೈನಾರ್ ಕುಕ್ಕಾಜೆ ವಂದಿಸಿದರು.
ಯೆನೆಪೊಯ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಔಷಧಿಯನ್ನು ಉಚಿತವಾಗಿ ವಿತರಿಸಲಾಯಿತು.