×
Ad

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಗಾಂಜಾ ಪತ್ತೆ

Update: 2023-08-10 20:24 IST

ಮಂಗಳೂರು: ನಗರದ ‘ಮಂಗಳೂರು ಜಂಕ್ಷನ್ ರೈಲು ನಿಲ್ದಾಣ’ದ ಎರಡನೇ ಪ್ಲಾಟ್ ಫಾರಂನಲ್ಲಿ ಗುರುವಾರ ಪೂ.11:15ಕ್ಕೆ ಕಾರವಾರ-ಯಶವಂತಪುರ (ನಂ.16516) ಎಕ್ಸ್‌ಪ್ರೆಸ್ ರೈಲಿನಲ್ಲಿ 3,16,650 ರೂ. ಮೌಲ್ಯದ 6.333 ಕೆ.ಜಿ ತೂಕದ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೈಲಿನ ನಿಯಮಿತ ತಪಾಸಣೆ ವೇಳೆ ಈ ಗಾಂಜಾ ಪತ್ತೆಯಾಗಿದೆ. ಅನಾಮಿಕ ವ್ಯಕ್ತಿಗೆ ಸೇರಿದ ಈ ಬ್ಯಾಗ್‌ನಲ್ಲಿ ಗಾಂಜಾ ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಈವರೆಗೆ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು ಪೂರ್ವ ಅಬಕಾರಿ ವಿಭಾಗದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿ ದಿದೆ. ಕಾರ್ಯಾಚರಣೆಯಲ್ಲಿ ಪಾಲ್ಘಾಟ್ ವಿಭಾಗದ ಸಿಐಬಿ ಮುಖ್ಯ ನಿರೀಕ್ಷಕ ಎನ್.ಕೇಸವದಾಸ್, ಮಂಗಳೂರು ರೈಲ್ವೆ ಠಾಣೆಯ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಯಾದವ್, ಸಿಐಬಿ ಎಸ್ಸೈ ದೀಪಕ್ ಎ.ಪಿ., ಅಜಿತ್ ಅಶೋಕ್ ಎ.ಪಿ, ಎಎಸ್ಸೈ ಸಾಜು ಕೆ., ಎಸ್.ಎಂ. ರವಿ., ಮಂಗಳೂರು ರೈಲ್ವೆ ಠಾಣೆಯ ಎಎಸ್ಸೈ ಕೆ.ಶಶಿ, ಸಿಐಬಿ ಹೆಡ್ ಕಾನ್‌ಸ್ಟೇಬಲ್ ಎನ್.ಅಶೋಕ್, ಅಜೀಶ್ ಒ.ಕೆ., ಮಂಗಳೂರು ಜಂಕ್ಷನ್ ಕಾನ್‌ಸ್ಟೇಬಲ್ ಟಿ.ಪಾಂಡುರಂಗ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News