×
Ad

ವಿಟ್ಲ: ಬಾಲಕಿಗೆ ಕಿರುಕುಳ ಆರೋಪ; ಯುವಕನ ವಿರುದ್ಧ ಪ್ರಕರಣ ದಾಖಲು

Update: 2023-08-25 21:56 IST

ವಿಟ್ಲ: ಬಾಲಕಿಯನ್ನು ಪುಸಲಾಯಿಸಿ ಯುವಕನೋರ್ವ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಕಿರುಕುಳ ನೀಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ನೌಷಾ‌ದ್ ಎಂದು ಗುರುತಿಸಲಾಗಿದೆ.

ಆರೋಪಿ ನೌಷಾ‌ದ್ ಬಾಲಕಿಯ ಮನೆಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಶಾಲೆಗೆ ಹೋಗುತ್ತಿದ್ದ ಆಕೆಯನ್ನು ಪುಸುಲಾಯಿಸಿ ಬೀಚಿಗೆ ಹೋಗುವ ಎಂದು ಹೇಳಿ ಕರೆದುಕೊಂಡು ಹೋಗಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಂದಿನಂತೆ ಬಾಲಕಿ ಮನೆಯಿಂದ ಶಾಲೆಗೆ ಹೊರಟಿದ್ದು, ಆದರೆ ಆಕೆ ಶಾಲೆಗೆ ಹೋಗದಿದ್ದಾಗ ಶಿಕ್ಷಕಿಯು ನಿಮ್ಮ ಮಗಳು ಈ ದಿನ ಶಾಲೆಗೆ ಬಂದಿರುವುದಿಲ್ಲವಾ? ಎಂಬುದಾಗಿ ಮನೆಯವರಲ್ಲಿ ವಿಚಾರಿಸಿದ್ದಾರೆ. ಈ ವೇಳೆ ವಿಷಯ ತಿಳಿದ ಬಾಲಕಿಯ ತಾಯಿಯು ಆಕೆಯ ಸಹಪಾಠಿಗಳಲ್ಲಿ ವಿಚಾರಿಸಿದಾಗ ಆಕೆ ಬಸ್ ನಲ್ಲಿ ಬಂದು‌ ನಂತರ ಬೈಕ್ ನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News