ಗ್ರೀನ್ ಸ್ಟಾರ್ ಗಟ್ಟಮನೆ: ನೂತನ ಪದಾಧಿಕಾರಿಗಳ ಆಯ್ಕೆ
ನೂತನ ಪದಾಧಿಕಾರಿಗಳು
ಗಟ್ಟಮನೆʼ: ಇತ್ತೀಚೆಗೆ ನಡೆದ ʼಗ್ರೀನ್ ಸ್ಟಾರ್ ಗಟ್ಟಮನೆʼ ಇದರ ವಾರ್ಷಿಕ ಮಹಾ ಸಭೆಯಲ್ಲಿ 2023-24 ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಶೀದ್ ಸನ್ಯಾಸಿಗುಡ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರ. ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ ಸ್ವಾಗತ ಭಾಷಣ ಮಾಡಿದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಆಸಿಫ್ ಜಿ.ಎಸ್, ಉಪಾಧ್ಯಕ್ಷರಾಗಿ ಸುಹೈಬ್, ಪ್ರ. ಕಾರ್ಯದರ್ಶಿಯಾಗಿ ರಶೀದ್, ಜೊತೆ ಕಾರ್ಯದರ್ಶಿಯಾಗಿ ಷರೀಫ್ ಹಾಗೂ ಕೋಶಾಧಿಕಾರಿಯಾಗಿ ಬಸೀರ್ ಡಿ.ಎ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಲತೀಫ್, ಮಾಜಿ ಕಾರ್ಯದರ್ಶಿ ಮುಸ್ತಫಾ, ಸದಸ್ಯರಾದ ಸಿರಾಜ್ ,ಇಕ್ಬಾಲ್ ,ರಿಯಾಝ್, ಶರಫುದ್ದೀನ್, ಹನೀಫ್‌ಅಲಿ, ಶರೀಫ್ ಎಸ್‌ಎ.ಕೆ, ಆಸಿಫ್, ಶಾಕಿರ್ ಕುಂಬ್ರ, ಹಮೀದ್ ಕುಪ್ಪೆಟ್ಟಿ, ಅಶ್ರಪ್ ತಂಙಳ್, ಅಂದಾನ್ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ರಶೀದ್ ಬೆದ್ರಗುರಿ ವಂದಿಸಿದರು.