×
Ad

ಯುವತಿಗೆ ಕಿರುಕುಳ ಪ್ರಕರಣ: ಆರೋಪಿ ಸೆರೆ

Update: 2024-08-31 18:52 IST

ಮೂಡುಬಿದಿರೆ: ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನ್ನು ಇರುವೈಲು ನಿವಾಸಿ ಸದ್ಯ ಕೋಟೆಬಾಗಿಲುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅರ್ಶದ್ (21) ಎಂದು ತಿಳಿದು ಬಂದಿದೆ.

ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮತ್ತು ಆರೋಪಿ ಅರ್ಷದ್ 4 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಯುವತಿ ಅರ್ಷದ್‌ ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. ಗುರುವಾರ ಸಂಜೆ ಯುವತಿ ಪೇಟೆಯ ಟೈಲರ್‌ ಅಂಗಡಿಯೊಂದರಲ್ಲಿ ಕಾಣ ಸಿಕ್ಕಿದ್ದು, ಅಲ್ಲಿಗೆ ಬಂದ ಅರ್ಷದ್‌ ಪ್ರೀತಿ ನಿರಾಕರಿಸುತ್ತಿರುವ ಮತ್ತು ಫೋನ್‌ ಕರೆಗಳನ್ನು ಸ್ವೀಕರಿಸದ ಕುರಿತು ತರಾಟಗೆ ತೆಗೆದುಕೊಂಡು ಯುವತಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಗ ಯುವತಿ ಕಿರುಚಾಡಿದ ಕಾರಣ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿರುವುದನ್ನು ಕಂಡು ಅರ್ಷದ್‌ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಈ ಸಂಬಂಧ ಯುವತಿ ಮೂಡಬಿದ್ರೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮೂಡಬಿದ್ರೆ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸ್‌ ತಂಡ ಆರೋಪಿ ಅರ್ಷದ್‌ನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News