×
Ad

ಹ್ಯೂಮನಿಟಿ ಟ್ರಸ್ಟ್‌ನ ಶ್ರೇಷ್ಠ ‘ಅಭಿಮಾನಿ’ ಗೌರವ ಪುರಸ್ಕಾರ ಪ್ರಕಟ

Update: 2023-07-29 19:31 IST

ಮಂಗಳೂರು, ಜು.29: ಬೆಳ್ಮಣ್‌ನ ಹ್ಯೂಮನಿಟಿ ಟ್ರಸ್ಟ್ ಕೊಡಮಾಡುವ ‘ಅಭಿಮಾನಿ’ ಗೌರವ ಪುರಸ್ಕೃತರ ಪಟ್ಟಿ ಪ್ರಕಟಗೊಂಡಿವೆ.

ಬಣಕಲ್‌ನ ಸಜೀದ್, ಮೂಡುಬಿದಿರೆಯ ಪ್ರಕಾಶ್ ಜಿ. ಶೆಟ್ಟಿಗಾರ್, ಶಿವಮೊಗ್ಗದ ರಾಜು ಆರ್., ಇಸ್ರೇಲ್‌ನ ಪ್ಲಾವಿ ಮಾಥಾಯಸ್, ಕುವೈತ್‌ನ ಜಾನ್ಸನ್ ಡಿ’ಅಲ್ಮೆಡ, ಸಾಲೆತ್ತೂರಿನ ಮೌರೀಸ್ ಡಿಸೋಜ, ಕಟೀಲ್‌ನ ಮ್ಯಾಕ್ಸಿಮ್ ಸೆಕ್ವೀರಾ, ಮೂಡುಬಿದಿರೆಯ ಸುನೀಲ್ ಮೆಂಡೋನ್ಸ, ದುಬೈನ ಜಾಯ್ ಪೇರರಾ, ಕಿನ್ನಿಗೋಳಿಯ ಲೋಡ್ ಡಿಸೋಜ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಟ್ರಸ್ಟ್‌ನ ಮುಖ್ಯಸ್ಥ ರೋಷನ್ ಬೆಳ್ಮಣ್ ತಿಳಿಸಿದ್ದಾರೆ.

ಸಮಾಜದ ಹಿತಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಾ ಬಂದಿರುವ ಟ್ರಸ್ಟ್ ಆರ್ಥಿಕ ದುರ್ಬಲರ ಪ್ರಗತಿಗೆ ಸದಾ ಶ್ರಮಿಸುತ್ತಾ ಬಂದಿದೆ. ಅದರಂತೆ ಆ.27ರಂದು ಮೂಡುಬಿದಿರೆ ಸಮೀಪದ ಪಡುಮೂರ್ನಡು ಪಾಂಚಜನ್ಯ ಸಭಾಂಗಣ ಬನ್ನಡ್ಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಚಿತ ವಸತಿ ಯೋಜನೆ ಉದ್ಘಾಟನೆ ನೆರವೇರಲಿದೆ.

ಕರ್ನಾಟಕ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಮ್ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎನ್. ಸಂತೋಷ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಪತ್ರಕರ್ತರಾದ ವಿಜಯಲಕ್ಷಿ ಶಿಬರೂರು, ವಾಲ್ಟರ್ ನಂದಳಿಕೆ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News