×
Ad

ಪಾಲ್ದನೆ ಚರ್ಚ್‌ನಲ್ಲಿ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭಾ ಸಂಘಟನೆಯ ಘಟಕ ಉದ್ಘಾಟನೆ

Update: 2023-11-05 16:05 IST

ಮಂಗಳೂರು, ನ.5: ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್‌ನಲ್ಲಿ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭಾ ಸಂಘಟನೆಯ ಘಟಕವನ್ನು ರವಿವಾರ ಉದ್ಘಾಟಿಸಲಾಗಿದೆ.

ಬಲಿ ಪೂಜೆಯ ಸಂದರ್ಭ 13 ಮಂದಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಬಲಿಪೂಜೆಯ ನೇತೃತ್ವವನ್ನು ಚರ್ಚಿನ ಪ್ರಧಾನ ಗುರು ಫಾ. ಆಲ್ಬನ್ ಡಿಸೋಜ ವಹಿಸಿ ದಿನದ ಮಹತ್ವವನ್ನು ವಿವರಿಸಿದರು.

ಸಂಘದ ನಿರ್ದೇಶಕ ಫಾ. ಪ್ರಕಾಶ್ ಲೋಬೊ ಸಂಘಟನೆಯ ಧ್ಯೇಯ, ಸದಸ್ಯರ ನಡವಳಿಕೆ, ಸಮಾಜ ಸೇವೆ ಮತ್ತು ನಿರಂತರ ಪ್ರಾರ್ಥನೆಯ ಬಗ್ಗೆ ವಿವರಿಸಿದರು. ಇನ್ನೋರ್ವ ಧರ್ಮಗುರು ಫಾ. ಡೆರಿಲ್ ಫೆರ್ನಾಂಡಿಸ್ ಬಲಿಪೂಜೆಯ ಸಹಭಾಗಿತ್ವ ವಹಿಸಿದ್ದರು.

ಸಂಘದ ಅಧ್ಯಕ್ಷ ಶುಭಾರ್ಟ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News