ಮಂಗಳೂರು | ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ IEEE ದಿನಾಚರಣೆ, BEASPIRE ಉದ್ಘಾಟನೆ
ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ IEEE Day 2025 ಮತ್ತು ಬಿಇಎಎಸ್‌ಪಿಐಆರ್‌ಇ(BEASPIRE ) ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು.
ಮಂಗಳೂರು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಮೋನಿಕಾ ಸದಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. “Education for a Rapidly Changing World” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಸಮಕಾಲೀನ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಂದಿಕೊಳ್ಳುವಿಕೆ, ನಾವೀನ್ಯತೆ ಮತ್ತು ಸಮಗ್ರ ಕಲಿಕೆಯ ಮಹತ್ವದ ಬಗ್ಗೆ ಹೇಳಿದರು. ವಿಕಸನಗೊಳ್ಳುತ್ತಿರುವ ಜಗತ್ತಿಗೆ ಪರಿಣಾಮಕಾರಿ ಕೊಡುಗೆ ನೀಡಲು ತಾಂತ್ರಿಕ ಪ್ರಾವೀಣ್ಯತೆ ಮತ್ತು ಸಾಮಾಜಿಕ ಜವಾಬ್ದಾರಿ ಎರಡನ್ನೂ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಇಸಿಇ ವಿಭಾಗದ ಅಧ್ಯಾಪಕಿ ಪ್ರೊ. ನಿಕಿತಾ ಸಿ ಸಂಯೋಜಿಸಿದರು. ಇಸಿಇ ವಿದ್ಯಾರ್ಥಿನಿ ಅಕ್ಮಲ ನಿರೂಪಿಸಿದರು.
ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಸಮಗ್ರ ಕಲಿಕೆಯನ್ನು ಉತ್ತೇಜಿಸಲು ರಸ ಪ್ರಶ್ನೆಗಳು, ಆಟಗಳು ಮತ್ತು ಭಾಷಣಗಳು ಸೇರಿದಂತೆ ಹಲವಾರು ತಾಂತ್ರಿಕ ಮತ್ತು ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.