×
Ad

ದಲಿತ ಸಂಘರ್ಷ ಸಮಿತಿಯ ದ.ಕ.ಜಿಲ್ಲಾ ಕಚೇರಿ ಉದ್ಘಾಟನೆ

Update: 2023-08-20 22:19 IST

ಮಂಗಳೂರು, ಆ.20: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದ.ಕ. ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಸ್ಟೇಟ್‌ಬ್ಯಾಂಕ್ ಸಮೀಪದ ಸೀವ್ಯೆವ್ ಟೂರಿಸ್ಟ್ ಹೋಮ್‌ನಲ್ಲಿ ರವಿವಾರ ಉದ್ಘಾಟಿಸಲಾಯಿತು.

ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ದಸಂಸ ದ.ಕ.ಜಿಲ್ಲಾ ಖಜಾಂಚಿ ಸದಾಶಿವ ಪಡುಬಿದ್ರಿ ದ.ಕ. ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯು ಸುಮಾರು 40 ವರ್ಷಗಳಿಂದ ಅನ್ಯಾಯಕ್ಕೋಳಗಾದ ಶೋಷಿತ ಸಮುದಾಯಗಳಿಗೆ ನ್ಯಾಯವನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ನಡೆಸುತ್ತಾ ಬಂದಿದೆ. ಸಮುದಾಯದ ನೌಕರರ, ಕೂಲಿ ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಡಾ.ಬಿ. ಆರ್. ಅಂಬೇಡ್ಕರ್‌ರ ಆಶಯಗಳಿಗೆ ಜೀವ ನೀಡಬೇಕಾಗಿದೆ ಎಂದರು.

ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಸೀತಾರಾಮ ಕೋಡಿಕಲ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ದಸಂಸ ಹಿರಿಯ ಮುಖಂಡ ಮಂಜಪ್ಪಪುತ್ರನ್, ಮಂಗಳೂರು ವಿಶ್ವವಿದ್ಯಾನಿಲಯದ ಪಿಹೆಚ್‌ಡಿ ಅಧ್ಯಯನ ವಿದ್ಯಾರ್ಥಿನಿ ಸವಿತಾ ಕಾವೂರು ಮಾತನಾಡಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ್ ಚಿಲಿಂಬಿ, ರಾಜಯ್ಯ ಮಂಗಳೂರು, ಬಾಲು ಕುಂದರ್,ನವೀನ್ ಕೋಟಿಮುರ, ರಾಕೇಶ್ ಕರಂಬಾರ್, ದಸಂಸ ಮಹಿಳಾ ಸಂಘಟನಾ ಸಂಚಾಲಕರಾದ ಕಲಾವತಿ ಕೋಟೆಕಾರ್, ಗಿರಿಜಾ ನಾಗೇಶ್ ಉಪಸ್ಥಿತರಿದ್ದರು.

ದಸಂಸ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ಸ್ವಾಗತಿಸಿದರು. ಲಕ್ಷ್ಮಣ್ ಕಾಂಚನ್ ವಂದಿಸಿದರು.

*ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ‘ಸಿಟ್’ಗೆ ಒಪ್ಪಿಸುವಂತೆ ಒತ್ತಾಯಿಸಿ ಆ.28ರಂದು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಬೆಳ್ತಂಗಡಿ ಚಲೋ ಧರಣಿಗೆ ಬೆಂಬಲ ಸೂಚಿಸಿ ಭಿತ್ತಿಪತ್ರ ಪ್ರದರ್ಶಿಶಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News