ಹಿರಾ ಕಾಲೇಜಿನ ಮುಹಮ್ಮದ್ ಸಿರಾಜುಲ್ ಹಸನ್ ಮೆಮೋರಿಯಲ್ ಸಭಾಂಗಣ ಲೋಕಾರ್ಪಣೆ
ಉಳ್ಳಾಲ, ಫೆ.26: ಬಬ್ಬುಕಟ್ಟೆಯಲ್ಲಿರುವ ಹಿರಾ ವಿದ್ಯಾಸಂಸ್ಥೆಯ ನೂತನವಾಗಿ ನಿರ್ಮಿಸಲಾದ ದಿ.ಮುಹಮ್ಮದ್ ಸಿರಾಜುಲ್ ಹಸನ್ ಮೆಮೋರಿಯಲ್ ಸಭಾಂಗಣವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಅಮೀನುಲ್ ಹಸನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಹಳಷ್ಟು ಮಹಿಳೆಯರು ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಯತ್ತ ಹೆಜ್ಜೆ ಇಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ನಿರ್ದಿಷ್ಟ ಗುರಿ ಇಟ್ಟು ಸಮಾಜಕ್ಕೆ ಮಾದರಿ ಆಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಂತಿ ಪ್ರಕಾಶನದ ವ್ಯವಸ್ದಾಪಕ ಮುಹಮ್ಮದ್ ಕುಂಞಿ, ವೆಲ್ಫೇರ್ ಪಾರ್ಟಿ ಕರ್ನಾಟಕ ಅಧ್ಯಕ್ಷ ತಾಹೀರ್ ಹುಸೇನ್, ಸಂತ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯ ಪ್ರಾಧ್ಯಾಪಕಿ ದಿವ್ಯಾ ವಿ. ಶೆಟ್ಟಿ, ಅನುಪಮಾ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ. ಮಾತನಾಡಿ ಶುಭ ಹಾರೈಸಿದರು .
ಜಮಾಅತೆ ಇಸ್ಲಾಮೀ ಕರ್ನಾಟಕ ಅಧ್ಯಕ್ಷ ಡಾ.ಸಾದ್ ಬೆಳ್ಗಾಮಿ ಸಮಾರಂಭದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಿರಾ ಕಾಲೇಜು ನಡೆದು ಬಂದ ಹಾದಿಯ ಕುರಿತು ಸಂಸ್ದೆಯ ಟ್ರಸ್ಟಿ ಡಾ.ಮುಬೀನ್ ಮಾಹಿತಿ ನೀಡಿದರು.
ಹಿರಾ ಕಾಲೇಜು ಪ್ರಾಂಶುಪಾಲೆ ಆಯಿಶಾ ಅಸ್ಮೀನಾ ಸ್ವಾಗತಿಸಿದರು.
ಸಿರಾಜ್ ಫಾತಿಮಾ ಹಾಗೂ ಫಾತಿಮಾ ರಮೀಯತ್ ಕಾರ್ಯಕ್ರಮ ನಿರೂಪಿಸಿದರು. ಪದವಿ ಕಾಲೇಜು ಪ್ರಾಶುಂಪಾಲೆ ಫಾತಿಮ ಮೆಹರೂನ್ ವಂದಿಸಿದರು.