×
Ad

ಮಂಗಳೂರು: ಕೆಥೊಲಿಕ್ ಸಭಾ ಆಂಜೆಲೊರ್ ಘಟಕದಿಂದ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟ

Update: 2023-12-11 13:54 IST

ಮಂಗಳೂರು, ಡಿ.11: ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಆಂಜೆಲೊರ್ ಘಟಕವು ನಾಗುರಿಯ ಗಾರ್ಡಿಯನ್ ಏಂಜೆಲ್ ಧರ್ಮಕ್ಷೇತ್ರದ ಅಂತರ ಧರ್ಮೀಯ ಸೌಹಾರ್ದ ಆಯೋಗದ ಸಹಯೋಗದಲ್ಲಿ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟವನ್ನು ರವಿವಾರ ಆಯೋಜಿಸಿತ್ತು.

ಸಿಟಿ ಮತ್ತು ಸಿಟಿ ಎಪಿಸ್ಕೊಪಲ್ ವಲಯದ ಪುರುಷರ 13 ವಾಲಿಬಾಲ್ ಮತ್ತು ಮಹಿಳೆಯರ 10 ಥ್ರೋಬಾಲ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ಕ್ರೀಡಾಕೂಟದ ಅಂಗವಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಧರ್ಮಕ್ಷೇತ್ರದ ವ್ಯಕ್ತಿಗಳಾದ ಪ್ರದೀಪ್ ಡಿಸೋಜ, ಹಾಗೂ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜರನ್ನು ಸನ್ಮಾನಿಸಲಾಯಿತು.

ವಾಲಿಬಾಲ್ ಪಂದ್ಯದಲ್ಲಿ ಬೊಂದೆಲ್ ಎ ತಂಡ ಟ್ರೋಫಿ ಗೆದ್ದರೆ, ಬೊಂದೆಲ್ ಬಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಥ್ರೋ ಬಾಲ್ ಪಂದ್ಯದಲ್ಲಿ ಬೊಂದೆಲ್ ತಂಡ ಪ್ರಥಮ ಹಾಗೂ ವಾಮಂಜೂರು ತಂಡವು ದ್ವಿತೀಯ ಸ್ಥಾನ ಗಳಿಸಿತು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News