×
Ad

ಬ್ಯಾರಿ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳಿಗೆ ಆಹ್ವಾನ

Update: 2025-11-24 23:02 IST

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.7ರಂದು ಪುತ್ತೂರು ಪುರಭವನದಲ್ಲಿ ಹಮ್ಮಿಕೊಂಡಿರುವ ಱಬ್ಯಾರಿ ಅಕಾಡಮಿ ಚಮ್ಮನ’ (ಗೌರವ ಪುರಸ್ಕಾರ) ಮತ್ತು ʼವಿದ್ಯಾರ್ಥಿ ಸಂಗಮ’ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಸಾಂಪ್ರದಾಯಿಕ ಬ್ಯಾರಿ ಆಹಾರ ಮತ್ತು ಮೆಹಂದಿ ವಿನ್ಯಾಸ ಹಾಗೂ ಮಕ್ಕಳಿಗೆ ಬ್ಯಾರಿ ಹಾಡು ಸ್ಪರ್ಧೆ ಆಯೋಜಿಸಿದೆ.

ಸಾಂಪ್ರದಾಯಿಕ ಆಹಾರ ಸ್ಪರ್ಧೆಯ ವಿಜೇತರಿಗೆ 4,000 ರೂ., 3,000 ರೂ., 2,000 ರೂ. ಮತ್ತು ಮೆಹಂದಿ ವಿನ್ಯಾಸಕ್ಕೆ 3,000, ರೂ. 2,000 ರೂ., 1,000 ರೂ. ಹಾಗೂ ಮಕ್ಕಳ ಬ್ಯಾರಿ ಹಾಡು ಸ್ಪರ್ಧೆಗೆ 1,000 ರೂ., 750 ರೂ., 500 ರೂ.ವನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಅಕಾಡಮಿಯ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗೆ ಡಿ.4ರೊಳಗೆ ಡಾ. ಹಾಜಿ ಎಸ್. ಅಬೂಬಕರ್ ಆರ್ಲಪದವು (ಮೊ.ಸಂ. 9901726144) ಅಥವಾ ಸಾರಾ ಅಲಿ ಪರ್ಲಡ್ಕ (ಮೊ.ಸಂ. 9353306183) ಅವರನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News