×
Ad

ಮಂಗಳೂರು: ಕೈಗೆಟಕುವ ದರದ ಸುಸಜ್ಜಿತ ಡಾರ್ಮಿಟರಿ 'ಐವರಿ ಇನ್‌' ಉದ್ಘಾಟನೆ

Update: 2025-08-11 19:46 IST

ಮಂಗಳೂರು: ನಗರದ ಅತ್ತಾವರದಲ್ಲಿರುವ ಐವರಿ ಎನ್‌ಕ್ಲೇವ್‌ನಲ್ಲಿ ಕೈಗೆಟಕುವ ದರದಲ್ಲಿ ವಸತಿ ಸೌಕರ್ಯ ನೀಡುವ ನೂತನ ಐಷಾರಾಮಿ ಹವಾನಿಯಂತ್ರಿತ ಡಾರ್ಮಿಟರಿ 'ಐವರಿ ಇನ್‌' ಅನ್ನು ಸೋಮವಾರ ಉದ್ಘಾಟಿಸಲಾಯಿತು.

ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮತ್ತು ಮಸ್ಜಿದ್-ಉಲ್-ಹುದಾ ಖತೀಬ್ ಮೊಹಮ್ಮದ್ ಕುಂಞಿ ಅವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಈ ಸೌಲಭ್ಯವು ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ ಬಜೆಟ್ ಸ್ನೇಹಿ ಮತ್ತು ಸ್ವಚ್ಛವಾದ ವಸತಿ ಬಯಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಗುರಿ ಹೊಂದಿದೆ.

ಇಲ್ಲಿ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಯೋಜನೆಗಳಿದ್ದು, ಸುಸಜ್ಜಿತ ಹಾಸಿಗೆಗಳು, ದೈನಂದಿನ ಹೌಸ್‌ಕೀಪಿಂಗ್, ಹೈ-ಸ್ಪೀಡ್ ವೈ-ಫೈ, ಸಿಸಿಟಿವಿ ಕಣ್ಗಾವಲು, ಲಿಫ್ಟ್ ಸೌಲಭ್ಯ, ಅಗತ್ಯ ವಸ್ತುಗಳ ಕಿಟ್ ಹಾಗೂ ಕಾರ್ ಪಾರ್ಕಿಂಗ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಾಸ್ ಲೇನ್ ವಾರ್ಡ್ ಕಾರ್ಪೊರೇಟರ್ ನವೀನ್ ಡಿ'ಸೋಜಾ, "ಈ ಉದ್ಯಮವು ಮಂಗಳೂರಿನಂತಹ ಸ್ಮಾರ್ಟ್ ಸಿಟಿಯಲ್ಲಿ ನಿರೀಕ್ಷಿಸುವ ವಸತಿ ಮಾನದಂಡಗಳನ್ನು ಪೂರೈಸುತ್ತದೆ" ಎಂದು ಹೇಳಿ, ಮಾಲೀಕರ ಈ ಹೊಸ ಪ್ರಯತ್ನಕ್ಕೆ ಯಶಸ್ಸನ್ನು ಹಾರೈಸಿದರು.

ಮೊಹಮ್ಮದ್ ಕುಂಞಿ ಅವರು ಮಾತನಾಡಿ, "ಈ ಪರಿಕಲ್ಪನೆಯು ವಿಶಿಷ್ಟ ಮತ್ತು ಸಮಯೋಚಿತವಾಗಿದೆ. ನಗರಕ್ಕೆ ಭೇಟಿ ನೀಡುವವರು ಕೇವಲ ಫ್ರೆಶ್ ಅಪ್ ಆಗಲು ದುಬಾರಿ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಬೇಕಾದ ಸಂದರ್ಭಗಳಿರುತ್ತವೆ. ಅಂತಹ ಪ್ರಯಾಣಿಕರಿಗೆ ಈ ಡಾರ್ಮಿಟರಿ ಮಾದರಿಯು ಅತ್ಯಂತ ಅನುಕೂಲಕರ ಪರ್ಯಾಯವಾಗಿದೆ" ಎಂದರು.

ಮಾಲೀಕರಾದ ರಿಝ್ವಾನ್ ಪಾಂಡೇಶ್ವರ, ಅಶ್ರಫ್ ಮತ್ತು ನೌಶಾದ್ ಮೆಟ್ರೋ ಅವರು ಮಾತನಾಡಿ, ಸಾಮಾನ್ಯ ವಸತಿ ಯೋಜನೆಗಳ ಜೊತೆಗೆ, ರೂ. 200 ಕ್ಕೆ 'ಫ್ರೆಶೆನ್-ಅಪ್' ಆಯ್ಕೆಯನ್ನು ಪರಿಚಯಿಸಲಾಗಿದೆ. ಇದರ ಅಡಿಯಲ್ಲಿ ಅತಿಥಿಗಳು ಚೆಕ್-ಇನ್ ಮಾಡಿ, ಎರಡು ಗಂಟೆಗಳ ಒಳಗೆ ಫ್ರೆಶ್ ಆಗಿ, ಚೆಕ್-ಔಟ್ ಮಾಡಬಹುದು. 24 ಗಂಟೆಗಳ ವಾಸ್ತವ್ಯಕ್ಕೆ ದೈನಂದಿನ ದರ 500 ರೂ. ಆಗಿರುತ್ತದೆ ಎಂದು ವಿವರಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಎ.ಕೆ. ಗ್ರೂಪ್ ಆಫ್ ಕಂಪೆನೀಸ್ ಅಧ್ಯಕ್ಷರಾದ ನಿಯಾಝ್ ಎ.ಕೆ., ಆ್ಯಪಲ್ ಮಾರ್ಟ್ ಪಾಲುದಾರ ಹನೀಫ್ ಪಿ.ಎಸ್., ಸ್ವದೇಶ್ ಗ್ರೂಪ್ ಅಧ್ಯಕ್ಷರಾದ ಕೆ. ಹಸೈನಾರ್, ಎಚ್‌ಐಎಫ್ ಇಂಡಿಯಾ ಅಧ್ಯಕ್ಷ ಆದಿಲ್ ಫರ್ವೇಝ್, ಮೊಹಿದ್ದೀನ್ ಉಸ್ಮಾನ್, ಯು.ಕೆ. ಬಾವ, ನವಾಝುದ್ದೀನ್, ಸಾಜಿದ್ ಎ.ಕೆ, ಎಸ್‌.ಎಂ. ಗ್ರೂಪ್ ಆಫ್ ಕಂಪೆನೀಸ್ ನಿರ್ದೇಶಕರಾದ ಎಸ್ ಎಂ ಫಾರೂಕ್ ಮತ್ತು ಶೆಫರ್ಡ್ ಇಂಟರ್‌ನ್ಯಾಶನಲ್ ಅಕಾಡೆಮಿ ಅಧ್ಯಕ್ಷರಾದ ಆರ್ಕಿಟೆಕ್ಟ್ ನಿಸಾರ್ ಉಪಸ್ಥಿತರಿದ್ದರು.


























 















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News