×
Ad

ಮೇ.3 ಕಣಚೂರು ಫಿಸಿಯೋಥೆರಪಿ, ನರ್ಸಿಂಗ್‌ ಸೈನ್ಸ್‌, ಅಲೈಡ್‌ ಹೆಲ್ತ್‌ ಸೈನ್ಸ್‌ ಘಟಿಕೋತ್ಸವ ಸಮಾರಂಭ

Update: 2025-04-30 14:33 IST

ಉಳ್ಳಾಲ: ಕಣಚೂರು ಇಸ್ಲಾಮಿಕ್‌ ಎಜ್ಯುಕೇಷನ್‌ ಟ್ರಸ್ಟ್‌ ಇದರ ಫಿಸಿಯೋಥೆರಪಿ, ನರ್ಸಿಂಗ್‌ ಸೈನ್ಸ್‌ ಹಾಗೂ ಅಲೈಡ್‌ ಹೆಲ್ತ್‌ ಸೈನ್ಸಸ್‌ ಸಂಸ್ಥೆಯ ದ್ವಿತೀಯ ವರ್ಷದ ಘಟಿಕೋತ್ಸವ ಸಮಾರಂಭ ಮೇ.3 ರಂದು ಬೆಳಿಗ್ಗೆ 10.30 ಕ್ಕೆ ನಾಟೆಕಲ್‌ ಕಣಚೂರು ಕಾನ್ಫರೆನ್ಸ್‌ ಡ್ರೋಮ್‌ ನಲ್ಲಿ ಜರಗಲಿದೆ. ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅಥೀಕ್‌ ( ಐಎಎಸ್‌ ) ಪದವಿ ಪ್ರಧಾನ ಮಾಡಲಿದ್ದಾರೆ ಎಂದು ಕಣಚೂರು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಮೊಹಮ್ಮದ್‌ ಸುಹೈಲ್‌ ಹೇಳಿದರು.

ಅವರು ತೊಕ್ಕೊಟ್ಟು ಪ್ರೆಸ್‌ ಕ್ಲಬ್‌ ನಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲೀ ಕರ್ನಾಟಕ ಸ್ಟೇಟ್‌ ಅಲೈಡ್‌ ಹೆಲ್ತ್‌ ಕೇರ್‌ ಕೌನ್ಸಿಲ್‌ ಅಧ್ಯಕ್ಷ ಡಾ. ಯು.ಟಿ.ಇಫ್ತಿಕಾರ್‌ ಫರೀದ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಣಚೂರು ಇಸ್ಲಾಮಿಕ್‌ ಎಜ್ಯುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಅಧ್ಯಕ್ಷತೆ ವಹಿಸಲಿದ್ದಾರೆ. 203 ಪ್ಯಾರಾಮೆಡಿಕಲ್ ಕಾಲೇಜುಗಳ ಪೈಕಿ, ಶಿಜಾನಾ ಬಿ.ಎಸ್‌.ಸಿ. ರಿನಲ್ ಡಯಾಲಿಸಿಸ್ ತಂತ್ರಜ್ಞಾನ ವಿಭಾಗದಲ್ಲಿ ಓವರಾಲ್‌ ಟಾಪರ್‌ ಆಗಿ ಆಯ್ಕೆಯಾಗಿದ್ದಾರೆ. ಈ ಅದ್ಭುತ ಸಾಧನೆಯ ಜೊತೆಗೆ, ಅವರು ಮೊದಲನೇ ವರ್ಷದ ರಿನಲ್ ಡಯಾಲಿಸಿಸ್ ತಂತ್ರಜ್ಞಾನದಲ್ಲಿ ದ್ವಿತೀಯ ಸ್ಥಾನ, ದ್ವಿತೀಯ ವರ್ಷದಲ್ಲಿ ಪ್ರಥಮ ಸ್ಥಾನ, ಮತ್ತು ಮೂರನೇ ವರ್ಷದಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ. ಶಿಜಾನಾ ಅವರ ಈ ಶೈಕ್ಷಣಿಕ ಪಯಣ ಸಹಪಾಠಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದ ಅವರು 2025ನೇ ಸಾಲಿನ ಡಾ. ಕಣಚೂರ್ ಮೋನು ಚಿನ್ನದ ಪದಕಕ್ಕೆ ಬ್ಯಾಚುಲರ್ ಆಫ್ ಫಿಸಿಯೊಥೆರಪಿ (BPT) ವಿಭಾಗದಲ್ಲಿ: ಡಾ. ಅಸ್ಮಿತಾ ಶ್ರೇಷ್ಟ, ಹಾಗೂ ಮಾಸ್ಟರ್‌ಸ್ ಆಫ್ ಫಿಸಿಯೊಥೆರಪಿ (MPT) ವಿಭಾಗದಲ್ಲಿ: ಡಾ. ಅಥುಲ್ಯಾ ಪಿಕೆ ಆಯ್ಕೆಯಾಗಿದ್ದಾರೆ ಎಂದರು.

ಕಣಚೂರು ಇನ್ಸ್ಟಿಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಪ್ರಾಂಶುಪಾಲೆ ಡಾ. ಶಮೀಮಾ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಡಿಯಲ್ಲಿ ಕಣಚೂರು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷ ಉತ್ತಮ ಶೈಕ್ಷಣಿಕ ಸಾಧನೆ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ. ಒಟ್ಟು 14 ಮಂದಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಶ್ರೇಷ್ಠ ಸ್ಥಾನ ಗಳಿಸಿದ್ದಾರೆ. ಸ್ನಾತಕೋತ್ತರ ಪೂರ್ವದ ಅಧ್ಯಯನ (BPT) ವಿಭಾಗದಲ್ಲಿ ಡಾ. ಅಸ್ಮಿತಾ ಶ್ರೇಷ್ಠ ಒಟ್ಟು ಯೂನಿವರ್ಸಿಟಿ ಟಾಪರ್ – ಪ್ರಥಮ ರ್ಯಾಂಕ್‌ , 1ನೇ ವರ್ಷ – 1ನೇ ರ್ಯಾಂಕ್, 2ನೇ ವರ್ಷ – 4ನೇ ರ್ಯಾಂಕ್, 3ನೇ ವರ್ಷ – 10ನೇ ರ್ಯಾಂಕ್ , 4ನೇ ವರ್ಷ – 4ನೇ ರ್ಯಾಂಕ್ ಪಡೆಯುವುದರ ಜೊತೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಡಾ. ಆರ್ಜಿ ಶಾ ಒಟ್ಟು – 7ನೇ ರ್ಯಾಂಕ್, 1ನೇ ವರ್ಷ – 4ನೇ ರ್ಯಾಂಕ್, 4ನೇ ವರ್ಷ – 1ನೇ ರ್ಯಾಂಕ್ ಗಳಿಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಡಾ. ಕೃತಿಕಾ 4ನೇ ವರ್ಷ – 2ನೇ ರ್ಯಾಂಕ್ ,ಡಾ. ಅಫೀಫಾ ಪಿ.ಬಿ. 4ನೇ ವರ್ಷ – 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸ್ನಾತಕೋತ್ತರ (MPT) ವಿಭಾಗದಲ್ಲಿ ಸಾಧನೆ: ಕಾರ್ಡಿಯೋವಾಸ್ಕ್ಯುಲರ್ ಮತ್ತು ಪಲ್ಮನರಿ ಸೈನ್ಸ್ ವಿಭಾಗದಲ್ಲಿ ಡಾ. ಅತುಲ್ಯಾ ಪಿ.ಕೆ., ಪಿಟಿ – 1ನೇ ರ್ಯಾಂಕ್ ಗಳಿಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಡಾ. ಜಿಷ್ನಾ ಎಂ.ಎಂ. – 4ನೇ ರ್ಯಾಂಕ್, ಡಾ. ಅಲೀನಾ ಜಾರ್ಜ್ – 8ನೇ ರ್ಯಾಂಕ್, ಡಾ. ಅಮಿನಾ ಎಸ್. – 9ನೇ ರ್ಯಾಂಕ್, ಕಮ್ಯೂನಿಟಿ ಹೆಲ್ತ್ ಫಿಸಿಯೋಥೆರಪಿ ವಿಭಾಗದಲ್ಲಿ ಡಾ. ಫೈಝಲ್ ಮಜೀದ್ – 2ನೇ ರ್ಯಾಂಕ್, ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಡಾ. ಸುಹೈಲ್ ಆರನೇ ರ‍್ಯಾಂಕ್, ಡಾ. ಭಿಸ್ಕರ್ ಪ್ರಿಯಲ್ ಅನಿಲ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಫಿಸಿಯೋಥೆರಪಿ ಉಪಪ್ರಾಂಶುಪಾಲೆ ರೇಷ್ಮಾ ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News