×
Ad

ಕಣಚೂರು: ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಸಮಾರಂಭ

Update: 2025-05-17 14:02 IST

ದೇರಳಕಟ್ಟೆ:ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ನಾಟೆಕಲ್ ಇದರ ಆಶ್ರಯದಲ್ಲಿ ಬಿ.ಎಸ್ಸಿ. ನರ್ಸಿಂಗ್ 9ನೇ ಬ್ಯಾಚ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಸಮಾರಂಭ ಕಣಚೂರು ಸಮ್ಮೇಳನ ಡ್ರೋಮ್ ನಲ್ಲಿ ಶನಿವಾರ ನಡೆಯಿತು.

ನಿಟ್ಟೆ ಡೀಮ್ಡ್ ಯುನಿವರ್ಸಿಟಿ ರಿಜಿಸ್ಟ್ರಾರ್ ಡಾ. ಹರ್ಷ ಹಾಲಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಇರುತ್ತದೆ. ನೀವು ಯಾವುದನ್ನು ಆಯ್ಕೆ ಮಾಡಿದ್ದೀರೋ ಅದನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ಇದು ವೈದ್ಯಕೀಯ ಶಿಕ್ಷಣದ ಒಂದು ಭಾಗ ಆಗಿದೆ. ಉತ್ತಮ ಶಿಕ್ಷಕ ಬಳಗ ಇಲ್ಲಿದೆ. ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿದರೆ ಮಾತ್ರ ಉತ್ತಮ ಗುರಿ ತಲುಪಲು ಸಾಧ್ಯ ಎಂದರು.

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ಪ್ರಾಂಶುಪಾಲ ಡಾ. ಸೀನಿಯರ್ ಜೂಡಿ, ನರ್ಸಿಂಗ್ ಶಿಕ್ಷಣದ ಅಗತ್ಯತೆ, ಕಲಿಕೆಯ ಬಗ್ಗೆ ಮಾಹಿತಿ ನೀಡಿದರು.

ಕಣಚೂರ್ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರು ರಾಜ್ಯಮಟ್ಟದ ರ್ಯಾಂಕ್, ಶೇ.100 ಫಲಿತಾಂಶ ಕಣಚೂರು ನರ್ಸಿಂಗ್ ಕಾಲೇಜು ಪಡೆದಿದೆ. ಉತ್ತಮ ‌ಶಿಕ್ಷಕರು ಇಲ್ಲಿದ್ದಾರೆ. ಚೆನ್ನಾಗಿ ಕಲಿಯಲು ಅವಕಾಶ ಕೂಡ ಇದೆ. ಪ್ರಯತ್ನ ಪಟ್ಟರೆ ಚಿನ್ನದ ಪದಕವನ್ನು ಗಳಿಸಬಹುದು. ಕಾಲೇಜಿನ ನಿಯಮ ಪಾಲಿಸಿ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಜೋಸಿ ಪೌಲ್, ಡಾ. ಶಹನವಾಝ್, ಡಾ.ರೋಹನ್ ಮೊನೀಸ್ ಉಪಸ್ಥಿತರಿದ್ದರು .

ರೆಹನಾ ಬಾನು ಕಿರಾಅತ್ ಪಠಿಸಿದರು. ಕಣಚೂರು ನರ್ಸಿಂಗ್ ಕಾಲೇಜು ಪ್ರಿನ್ಸಿಪಾಲ್ ಫ್ರೊ. ಡಾ. ಮೋಲಿ ಸಲ್ಡಾನಾ ಸ್ವಾಗತಿಸಿದರು. ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಶಿಕ್ಷೆಕಿ ರಶ್ಮಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಾಲಿನಿ ನೊರೋನ್ಹಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News