×
Ad

ಕರ್ನಾಟಕ ಅನುದಾನ ರಹಿತ ಪಪೂ ಕಾಲೇಜು ಆಡಳಿತ ಮಂಡಳಿಗಳ ಸಂಘದ ಸಭೆ

Update: 2024-09-01 20:45 IST

ಮಂಗಳೂರು, ಸೆ.1: ಕರ್ನಾಟಕ ಅನುದಾನ ರಹಿತ ಪಪೂ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ದ 2023-2024ನೆ ಸಾಲಿನ ವಾರ್ಷಿಕ ಮಹಾಸಭೆಯು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕುಪ್ಮಾದ ಗೌರವಾಧ್ಯಕ್ಷ ಕೆ.ಸಿ. ನಾಯಕ್, ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್. ನಾಯಕ್ ಸಭೆಯನ್ನು ಉದ್ಘಾಟಿಸಿದರು. 2023-24ನೆ ಸಾಲಿನ ವಾರ್ಷಿಕ ವರದಿಯನ್ನು ಕುಪ್ಮಾದ ರಾಜ್ಯ ಸಮಿತಿಯ ಕಾರ್ಯದರ್ಶಿ ಪ್ರೊ. ನರೇಂದ್ರ ನಾಯಕ್ ವಾಚಿಸಿದರು. ಕಾರ್ಯಕಾರಣಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ನಟ್ಟೊಜ ಆರ್ಥಿಕ ವರ್ಷದ ಆಯವ್ಯಯ ಪಟ್ಟಿಯನ್ನು ಮಂಡಿಸಿದರು.

ಕುಪ್ಮಾದ ಪದಾಧಿಕಾರಿಗಳದ ಕೀರ್ತನ್ ಕುಮಾರ್, ಡಾ.ಜಯರಾಮ್ ಶೆಟ್ಟಿ, ಡಾ. ಸುಧಾಕರ ಶೆಟ್ಟಿ, ಯುವರಾಜ್ ಜೈನ್, ವಿಶ್ವನಾಥ ಶೇಷಛಲ, ರಮೇಶ್ ಕೌಡೂರು, ಬಿ.ಎ.ನಝೀರ್ ಮತ್ತಿತರರು ಉಪಸ್ಥಿತರಿದ್ದರು. ಡಾ.ದೇವರಾಜ್ ಬಿ.ಕೆ. ಸ್ವಾಗತಿಸಿದರು. ದಿಲೀಪ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News