×
Ad

ಕೊಲ್ಲರ ಕೋಡಿ: ಮೀಲಾದ್ ಫೆಸ್ಟ್, ಸ್ಪೀಕರ್ ಯು.ಟಿ ಖಾದರ್‌ ಗೆ ಸನ್ಮಾನ

Update: 2024-09-18 11:59 IST

ನರಿಂಗಾನ, ಸೆ. 17: ನೂರುಲ್ ಹುದಾ ಮಸ್ಜಿದ್ ತಖ್ವಾ, ನೂರುಲ್ ಉಲೂಮ್ ಮದರಸ, ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಎನ್ ಐ ಮಹಮ್ಮದ್ ಅವರು ವಹಿಸಿದ್ದರು. ಕೊಲ್ಲರಕೋಡಿ ಮದರಸ ಸದರ್, ಇಮಾಮ್ ಇಝ್ಝುದ್ದೀನ್ ಅಹ್ಸನಿ ಮೌಲಿದ್ ಪಾರಾಯಣದ ನೇತೃತ್ವದಲ್ಲಿ ಮೌಲೀದ್ ಪಾರಾಯಣ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು.

ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರನ್ನು ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್ ಎಂ.ಬಿ, ಅಬ್ದುಲ್ ಖಾದರ್ ನಿಝಾಮಿ, ರಝಾಕ್ ಪಾರೆ, ಮಜೀದ್ ಪಾರೆ, ಇಬ್ರಾಹಿಂ ಹಾಜಿ ಪಾರೆ, ಇಬ್ರಾಹಿಂ ಅಹ್ಸನಿ, ಲತೀಫ್ ಮದನಿ, ಹಮೀದ್ ತಟ್ಲ, ಬಶೀರ್ ಎನ್.ಎಂ, ಆಸಿಫ್ ಕೆ.ಎಚ್, ಅನೀಸ್ ಬಲಪ್ಪು, ಉಪಸ್ಥಿತರಿದರು.

ಕೊಲ್ಲರಕೋಡಿ ಮದರಸ ಮುಅಲ್ಲಿಮ್ ಸಮದ್ ಮರ್ಝೂಕಿ ಕಾರ್ಯಕ್ರಮ ನಿರೂಪಿಸಿದರು.


Delete Edit


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News