ಕೊಣಾಜೆ | ಸೆ.28ರಂದು ಗಿಳಿವಿಂಡು ಸಮಾಲೋಚನಾ ಸಭೆ
Update: 2025-09-25 15:27 IST
ಕೊಣಾಜೆ : ಮಂಗಳೂರು ವಿಶ್ವ ವಿದ್ಯಾಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಪದವಿ, ಎಂ. ಫಿಲ್. ಮತ್ತು ಪಿ. ಎಚ್. ಡಿ. ಪಡೆದಿರುವ ಮತ್ತು ಶಿಕ್ಷಕ ಹಾಗೂ ಸಿಬ್ಬಂದಿ ಒಕ್ಕೂಟ ಗಿಳಿವಿಂಡು(ರಿ)ವಿನ ಉಡುಪಿ ಜಿಲ್ಲೆಯ ಸದಸ್ಯರ ಸಮಾಲೋಚನಾ ಸಭೆ ಯನ್ನು ಸೆಪ್ಟೆಂಬರ್ 28ರ ಭಾನುವಾರದಂದು ಉಡುಪಿಯ ಬ್ರಹ್ಮಗಿರಿಯಲ್ಲಿರುವ ರೆಡ್ ಕ್ರಾಸ್ ಸಭಾ ಭವನದಲ್ಲಿ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.
ಗಿಳಿವಿಂಡುವಿನ ಉಡುಪಿ ಜಿಲ್ಲೆಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸ ಬೇಕೆಂದು ಉಡುಪಿ ಜಿಲ್ಲಾ ಸಭೆಯ ಸಂಯೋಜಕ ಡಾ.ಗಣನಾಥ ಎಕ್ಕಾರು, ಗಿಳಿವಿಂಡುವಿನ ಕಾರ್ಯದರ್ಶಿ ಪ್ರೊ.ನಾಗಪ್ಪ ಗೌಡ. ಆರ್ ಹಾಗೂ ಅಧ್ಯಕ್ಷ ಪ್ರೊ.ಬಿ. ಶಿವರಾಮ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.