ಕೊಣಾಜೆ | ನವೀನ್‌ಕುಮಾರ್ ಪೆರುವಾಜೆಗೆ ಪಿ.ಎಚ್.ಡಿ ಪದವಿ
Update: 2025-09-25 15:29 IST
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನವೀನ್‌ಕುಮಾರ್ ಕೆ. ಅವರು ಮಂಡಿಸಿದ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ "ಫೈನಾನ್ಸಿಯಲ್ ಪರ್ಫಾರ್ಮೆನ್ಸ್ ಅನಾಲಿಸಿಸ್ ಆಫ್ ಸೆಲೆಕ್ಟ್ ಹೆಲ್ತ್ ಇನ್ಸೂರೆನ್ಸ್ ಕಂಪೆನಿಸ್ ಇನ್ ಇಂಡಿಯಾ" ಎಂಬ ಸಂಶೋಧನಾ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ಪದವಿ ನೀಡಿದೆ.
ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ.ಈಶ್ವರ ಪಿ. ಅವರು ಮಾರ್ಗದರ್ಶನ ನೀಡಿದ್ದರು.
ನವೀನ್‌ಕುಮಾರ್ ಅವರು ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ರಾಮ ನಾಯ್ಕ ಮತ್ತು ಗೀತಾ ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಅವರು ಯೆನೆಪೋಯ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.