×
Ad

ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕೋಟೆಬಾಗಿಲಿನ ಅನ್ಸಾರ್ ಗೆ ʼಜೂನಿಯರ್ ಮಿಸ್ಟರ್ ವರ್ಲ್ಡ್ ರನ್ನರ್ ಅಪ್ʼ ಪ್ರಶಸ್ತಿ

Update: 2025-11-22 18:16 IST

ದುಬೈ: ದುಬೈ ವರ್ಲ್ಡ್ ನ್ಯಾಚುರಲ್ ಗೇಮ್ಸ್ ಆಶ್ರಯದಲ್ಲಿ ನಡೆದ ಐಸಿಎನ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಪಂದ್ಯಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೂಡುಬಿದಿರೆ ತಾಲೂಕಿನ ಕೋಡೆಬಾಗಿಲು ನಿವಾಸಿ ಅನ್ಸಾರ್ ಅವರು ಎರಡು ಚಿನ್ನದ ಪದಕಗಳೊಂದಿಗೆ ʼಜೂನಿಯರ್ ಮಿಸ್ಟರ್ ವರ್ಲ್ಡ್ʼ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ಬಾಜನರಾಗಿದ್ದಾರೆ‌.

ದುಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ, ಸ್ಪೈನ್, ಕೊರಿಯಾ, ಪೋಲೆಂಡ್, ನ್ಯೂಯಾರ್ಕ್, ಆಸ್ಟ್ರೇಲಿಯಾ, ಪಾಕಿಸ್ತಾನ, ಇರಾನ್, ಚೈನಾ ಹಾಗೂ ಇತರ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

"ಮೆನ್ಸ್ ಫಿಟ್ನೆಸ್ ಫರ್ಸ್ಟ್ ಟೈಮರ್ " ವಿಭಾಗದಲ್ಲಿ ಚಿನ್ನದ ಪದಕ ಹಾಗೂ "ಮೆನ್ಸ್ ಫಿಸಿಕ್ ಫರ್ಸ್ಟ್ ಟೈಮರ್" ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಅನ್ಸಾರ್ ಅವರು ಜೂನಿಯರ್ ಮಿಸ್ಟರ್ ವರ್ಲ್ಡ್ ವಿಭಾಗದಲ್ಲಿ ರನ್ನರ್ ಅಪ್‌ ಆಗಿ ಹೊರಹೊಮ್ಮಿದ್ದಾರೆ.‌

ಇವರು ಕೋಟೆಬಾಗಿಲು ನಿವಾಸಿ ದಿ‌.ಅಬೂಬಕ್ಕರ್ ಮತ್ತು ಝುಬೈದಾ ದಂಪತಿ ಪುತ್ರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News