×
Ad

ಕಣ್ಣೂರು ಮಹಿಳಾ ಷರಿಅತ್ ಕಾಲೇಜಿನಲ್ಲಿ ಮಹ್ದಿಯ ಪದವಿ ಪ್ರದಾನ

Update: 2023-11-02 19:53 IST

ಮಂಗಳೂರು, ನ.2: ಕಣ್ಣೂರು ಎಜುಕೇಷನ್ ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿ ಕಾರ್ಯಾಚರಿಸುವ ಕಣ್ಣೂರು ಮಹಿಳಾ ಪಿಯು ಷರಿಅತ್ ಕಾಲೇಜಿನಲ್ಲಿ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಪೂರ್ತಿಗೊಳಿಸಿದ 20 ವಿದ್ಯಾರ್ಥಿನಿಯರಿಗೆ ಮಹ್ದಿಯ ಪದವಿ ಪ್ರದಾನ ಮಾಡಲಾಯಿತು.

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕರ್ನಾಟಕ ಮುಶಾವರ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅಲ್ -ಬುಖಾರಿ ದುಕ್ಕಲಡ್ಕ ಪದವಿ ಪ್ರದಾನ ಮಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಕೆ.ಬಿ. ಅಬ್ದುಲ್ ರಹ್ಮಾನ್ ಹಾಜಿ ನಸೀಮಾ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಅನ್ಸಾರುದ್ದೀನ್ ಪೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿ ಸ್ವಾಗತಿಸಿದರು. ಅರಬಿಕ್ ವಿಭಾಗದ ಮುಖ್ಯಸ್ಥ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮಿತ್ತಬೈಲ್ ಇರ್ಷಾದ್ ದಾರಿಮಿ ಅತಿಥಿಗಳಾಗಿ ಭಾಗವಹಿಸಿದ್ದರು.

ಮಹ್ದಿಯ ಕಾಲೇಜು ವಿದ್ಯಾರ್ಥಿನಿಗಳಿಂದ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ‘ಇಷಲ್ ಮದೀನ’ನಡೆಯಿತು. ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News