×
Ad

ಮಂಗಳೂರು: ಆ. 15ರಂದು ರಕ್ತದಾನ ಶಿಬಿರ

Update: 2024-08-13 17:19 IST

ಮಂಗಳೂರು: ಮಾನವೀಯ ಸಂದೇಶ ವೇದಿಕೆ ಮಂಗಳೂರು ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು, ಜಮಿಯತುಲ್ ಫಲ್ಹಾಹ್ ಮಂಗಳೂರು ಘಟಕ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಆ.15ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಗರದ ಕಂಕನಾಡಿಯ ಜಮಿಯತುಲ್ ಫಲ್ಹಾಹ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಸಮಾಜದಲ್ಲಿ ಮಾನವೀಯ ಸಂದೇಶ ಪಸರಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಮಾನವೀಯ ದೃಷ್ಟಿಕೋನದಲ್ಲಿ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ರಕ್ತದಾನ ನಡೆಸಲಾಗುವುದು. ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗದೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾನವೀಯ ಸಂದೇಶ ವೇದಿಕೆ ಸದಸ್ಯ ಮುಹಮ್ಮದ್ ಫರ್‌ಹಾನ್ ನದ್ವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಹಮ್ಮದ್ ಹನೀಫ್, ವೇದಿಕೆ ಸದಸ್ಯರಾದ ಮುಹಮ್ಮದ್ ಅಫ್ರಾಜ್ ನದ್ವಿಘಿ, ಸಲೀಂ ಕುದ್ರೋಳಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News