×
Ad

ಮಂಗಳೂರು | ಮೋದಿ ರೋಡ್ ಶೋ ಬಳಿಕ ಯುವಕನೋರ್ವನಿಗೆ ಬಿತ್ತು ಏಟು: ಕಾರಣವೇನು ಗೊತ್ತೆ?

Update: 2024-04-15 10:18 IST

ಮಂಗಳೂರು, ಎ.15: ನಗರದಲ್ಲಿ ರವಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಮುಗಿದ ಬಳಿಕ ಯುವಕನೋರ್ವನಿಗೆ ಏಟು ಬಿದ್ದ ಘಟನೆ ವರದಿಯಾಗಿದೆ.

ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬಳಿಗೆ ಯುವಕನೋರ್ವ ಮೊಬೈಲ್ ನಂಬರ್ ನೀಡಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಮಹಿಳೆಗೆ ಯುವಕನೋರ್ವ ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ನೀಡಿದ್ದ. ಈ ವಿಷಯ ಗೊತ್ತಾಗಿ ಆರೋಪಿ ಯುವಕನನ್ನು ಹಿಡಿದ ಮಹಿಳೆಯ ಪತಿ ಆತನ ಮೊಬೈಲ್ ಕಿತ್ತುಕೊಂಡು ಎರಡೇಟು ಬಿಗಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಯುವಕರ ತಂಡವೂ ಆರೋಪಿ ಯುವಕನಿಗೆ ಥಳಿಸಿದೆ.

ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಪರಿಸ್ಥಿತಿ ತಿಳಿಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News