×
Ad

ಮಂಗಳೂರು: ವೀಸಾ ಅವಧಿ ಮೀರಿದ ಆರೋಪ; ಇಬ್ಬರು ವಿದೇಶಿಯರು ವಶಕ್ಕೆ

Update: 2023-10-22 17:57 IST

ಮಂಗಳೂರು : ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ವಾಸವಾಗಿದ್ದ ಇಬ್ಬರು ವಿದೇಶಿಯರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಘಾನಾ ದೇಶದ ಸಲಾಂ ಕ್ರಿಸ್ಟೆನ್ ಮತ್ತು ನೈಜೀರಿಯಾದ ಅಂಕಿತೋಲ ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ಉಳಕೊಂಡಿದ್ದರು ಎನ್ನಲಾಗಿದೆ. ‌

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News