ಮಂಗಳೂರು: ನ.26ರಂದು ಹೋಮೀಯೊಪತಿ ವೈದ್ಯರ ಜಿಲ್ಲಾ ಮಟ್ಟದ ವಿಚಾರ ಸಂಕಿರಣ
Update: 2023-11-23 16:13 IST
ಮಂಗಳೂರು, ನ .23: ಭಾರತೀಯ ಹೋಮೀಯೊಪತಿ ವೈದ್ಯರ ಸಂಘ(IHMA) ಕರ್ನಾಟಕ ಮತ್ತು ಮಂಗಳೂರು ಘಟಕದ ಆಶ್ರಯದಲ್ಲಿ ನ.26ರಂದು ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಇಂಟಗ್ರೇಟೆಡ್ ಆಸ್ಪತ್ರೆ ಬಳಿಯ ವಿವೇಕಾನಂದ ಪ್ರಭು (RAPCC) ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10:30ರಿಂದ ಸಂಜೆ 4ರ ವರೆಗೆ ಕಾರ್ಯಕ್ರಮದಲ್ಲಿ ಕೊಚ್ಚಿನ್ ನ ಖ್ಯಾತ ಹೋಮೀಯೊಪತಿ ತಜ್ಞ ವೈದ್ಯೆ ಡಾ.ಜಸಲಿನ್ ಸಜೀಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ಐಎಚ್ಎಂಎ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಪ್ರವೀಣ್ ರಾಜ್ ಆಳ್ವ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.