×
Ad

ಮಂಗಳೂರು: AI ಚಾಲಿತ ಟೆಕ್ ಕಲಿಕಾ ವೇದಿಕೆ ಪ್ರಾರಂಭಿಸಿದ 'ಜಂಪ್ ವೇರ್'

Update: 2025-09-26 12:03 IST

ಮಂಗಳೂರು: ಎಡ್-ಟೆಕ್ ಮತ್ತು ಉದ್ಯೋಗ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಂಪ್ ವೇರ್ (JumpWhere) ಕಂಪೆನಿಯು ಮಂಗಳೂರಿನಲ್ಲಿ ಸೆ.24ರಂದು ನಡೆದ 'ಟೆಕ್ನೋವಾಂಝ 2025' ಕಾರ್ಯಕ್ರಮದಲ್ಲಿ ತನ್ನ AI ಆಧರಿತ ನವೀಕೃತ ತಂತ್ರಜ್ಞಾನ ಕಲಿಕೆ ವೇದಿಕೆ(Next-Gen Tech Learning Platform)ಯನ್ನು ಅನಾವರಣಗೊಳಿಸಿತು.

 

ಈ ಕಾರ್ಯಕ್ರಮವನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಹಲವಾರು ಉದ್ಯಮ ಕ್ಷೇತ್ರದ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

 

ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ AI ಆಧಾರಿತ ವೈಯಕ್ತಿಕ ಕಲಿಕೆ ಅವಕಾಶಗಳು, ಉದ್ಯಮದ ನೈಜ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಾಜೆಕ್ಟ್ ಗಳು ಮತ್ತು ಅಸೈನ್ಮೆಂಟ್ ಗಳು, AI/ML, ವೆಬ್ ಮತ್ತು ಮೊಬೈಲ್ ಡೆವಲಪ್ಮೆಂಟ್, ಕ್ಲೌಡ್, ಸೈಬರ್ ಸುರಕ್ಷತೆ ಮುಂತಾದ ಕ್ಷೇತ್ರಗಳ ಜಾಗತಿಕ ತಜ್ಞರ ವಿಷಯಗಳ ಕುರಿತ ಕಲಿಕೆ, ಉದ್ಯೋಗ ಸಿದ್ಧತಾ ತರಬೇತಿಗಳು, ಅಣಕು ಸಂದರ್ಶನಗಳು ಮತ್ತು ಮಾರ್ಗದರ್ಶನಗಳು ಜಂಪ್ ವೇರ್ ಟೆಕ್ ಲರ್ನಿಂಗ್ ಪ್ಲಾಟ್ ಫಾರ್ಮ್ ನ ಪ್ರಮುಖ ವೈಶಿಷ್ಟ್ಯಗಳಾಗಿವೆ.

 

ಜಂಪ್ ವೇರ್ ಸ್ಥಾಪಕ ಮುಹಮ್ಮದ್ ಸಾಕಿಬ್ ಮಾತನಾಡಿ, ನಮ್ಮ ಉದ್ದೇಶ ಪ್ರಥಮ ವರ್ಷದ ವಿದ್ಯಾರ್ಥಿಯಿಂದ ಹಿಡಿದು ಉದ್ಯೋಗದಲ್ಲಿರುವ ವೃತ್ತಿಪರರ ತನಕ ಎಲ್ಲರೂ ಉದ್ಯಮಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿಯವುದು ಮತ್ತು ಆತ್ಮವಿಶ್ವಾಸದಿಂದ ಸಾಮರ್ಥ್ಯ ತೋರಿಸಲು ಸಾಧ್ಯವಾಗುವಂತಹ ವೇದಿಕೆ ನಿರ್ಮಿಸುವುದು. ಇದು ತಂತ್ರಜ್ಞಾನ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿ ಭಾರತದ ಡಿಜಿಟಲ್ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಯತ್ನ ಎಂದು ಹೇಳಿದರು.

 

ಭಾರತದ ʼಐಟಿ ವಿಷನ್ 2030ʼ ಗುರಿಗಳಾದ ಉದ್ಯೋಗ ಸೃಷ್ಟಿ ಮತ್ತು ಡಿಜಿಟಲ್ ರಫ್ತುಗಳಿಗೆ ಅನುಗುಣವಾಗಿ ಈ ಕಾರ್ಯಕ್ರಮದಲ್ಲಿ ಮಂಗಳೂರಿನಂತಹ ಸಣ್ಣ ನಗರಗಳಿಂದ ಹೊಸ ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. ಸರಕಾರದ ಬೆಂಬಲ ಮತ್ತು ಉದ್ಯಮ ಸಹಯೋಗದೊಂದಿಗೆ, ಜಂಪ್ ವೇರ್ ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಜಂಪ್ವೇರ್ ಒಂದು ಎಡ್-ಟೆಕ್ ವೇದಿಕೆ. ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಉದ್ಯಮಕ್ಕೆ ತಕ್ಕ ಕೌಶಲ್ಯ ಕಲಿಸುವಲ್ಲಿ ಸಹಾಯ ಮಾಡುತ್ತದೆ. ಪ್ರಮಾಣಿತ ಇಂಟರ್ನ್ ಶಿಪ್ ಗಳು, ಉದ್ಯೋಗ ಮಾರ್ಗದರ್ಶನ ಮತ್ತು ಪ್ರಾಯೋಗಿಕ ತರಬೇತಿ ಮೂಲಕ ಮುಂದಿನ ಪೀಳಿಗೆಯ ಹೊಸ ಆವಿಷ್ಕಾರಕರು, ಡೆವಲಪರ್ ಗಳನ್ನು ಬೆಳೆಸುವ ಗುರಿ ಹೊಂದಿದೆ. ಕಲಿಕೆ ಮತ್ತು ಉದ್ಯಮದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕೇವಲ ಇಂಟರ್ನ್ ಶಿಪ್ ಮಾತ್ರವಲ್ಲ, ಉದ್ಯೋಗ ಹಾಗೂ ಭವಿಷ್ಯದ ವೃತ್ತಿ ಯಶಸ್ಸಿಗೆ ಸಹಾಯ ಮಾಡುತ್ತದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News