×
Ad

ಮಂಗಳೂರು: ʼಮುಲ್ಲರ್ ಮೆಡಿ ಎಕ್ಸ್ ಪೋ 2023ʼ ಚಾಲನೆ

Update: 2023-10-13 20:48 IST

ಮಂಗಳೂರು,ಅ.13;ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಬೆಳ್ಳಿಹಬ್ಬದ ಅಂಗವಾಗಿ, ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರವು ಅ.13,14 ಎರಡು ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನವನ್ನು ಫಾದರ್ ಮುಲ್ಲರ್ ಕನ್ ವೆನ್ಶನ್ ಸೆಂಟರ್ ಪಂಪ್ ವೆಲ್ ನಲ್ಲಿಂದುಎನ್ ಐ ಟಿ ಕೆ ಸುರತ್ಕಲ್ ಇದರ ಸಂಶೋಧನಾ ನಿರ್ದೇಶಕರಾದ ಡಾ. ಸತ್ಯಬೋದ್‌ ಕುಲಕರ್ಣಿ ಚಾಲನೆ ನೀಡಿದರು.

ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಅಧ್ಯಕ್ಷ ತೆ ವಹಿಸಿದ್ದರು. ಅಲೋಶಿಯಸ್ ಕುವೆಲ್ಲೋ, ಮತ್ತು ವಿವಿಧ ವಿಭಾಗದ ಮುಖ್ಯಸ್ಥರಾದ ಅಜಿತ್ ಮಿನೇಜಸ್,ಜೀವನ್ ಸಿಕ್ವೇರಾ,ನೆಲ್ಸನ್ ದೀರಜ್ ಪಾಯಸ್, ಡಾ.ಉದಯ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಂಜೀವ ರೈ ಸ್ವಾಗತಿಸಿದರು. ಸಮಾರಂಭದಲ್ಲಿ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ವಿವಿಧ ವಿಭಾಗದ ಮುಖ್ಯಸ್ಥರಾದ ಅಜಿತ್ ಮಿನೇಜಸ್,ಜೀವನ್ ಸಿಕ್ವೇರಾ,ನೆಲ್ಸನ್ ದೀರಜ್ ಪಾಯಸ್, ಡಾ.ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಪ್ರೊ.ಅಕ್ತರ್ ಹುಸೈನ್ ಅವರ ನೇತೃತ್ವದಲ್ಲಿ ಕಲಾಕೃತಿ ಪ್ರದರ್ಶನ, ಫಾ.ಮುಲ್ಲರ್ ವೈದ್ಯಕೀಯ ಸಂಸ್ಥೆಯ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಈ ವಸ್ತು ಪ್ರದರ್ಶನದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಸಂಶೋಧನಾ ಯೋಜನೆಗಳು ಮತ್ತು ಮಾದರಿಗಳ ಪ್ರಸ್ತುತಿಯ ,ಆರೋಗ್ಯದ ಬಗ್ಗೆ ಧನಾತ್ಮಕ ಪ್ರಚಾರ, ಆಹಾರ ಮತ್ತು ಪೌಷ್ಟಿಕತೆ, ಬಲ ಮತ್ತು ನೈರ್ಮಲ್ಯ, ವೈದ್ಯಕೀಯ ಉಪಕರಣಗಳು, ಪರಿಸರ ಮಾಲಿನ್ಯ ಈ ವಿಷಯಗಳಲ್ಲಿ ವಿವಿಧ ಶಾಲಾ ಕಾಲೇಜುಗಳ ನೂರ ಮೂವತ್ತೊಂದು ತಂಡಗಳಿಂದ ಪ್ರತ್ಯೇಕವಾಗಿ ಪ್ರದರ್ಶನ ನಡೆಯಿತು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News