×
Ad

ಮಂಗಳೂರು: ಭ್ರಷ್ಟಾಚಾರದ ವಿರುದ್ಧ ಮರಳುಶಿಲ್ಪ

Update: 2023-11-06 19:48 IST

ಮಂಗಳೂರು: ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಸಹಯೋಗದೊಂದಿಗೆ ಮಣಿಪಾಲದ ಮರಳು ಶಿಲ್ಪ ಕಲಾವಿದರು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಮರಳು ಶಿಲ್ಪ ಕಲಾಕೃತಿಯನ್ನು ಪಣಂಬೂರು ಕಡಲ ಕಿನಾರೆಯಲ್ಲಿ ರಚಿಸಿದರು.

ಕಲಾವಿದರಾದ ಶ್ರೀನಾಥ್ ಮಣಿಪಾಲ, ರವಿ ಹಿರೇಬೆಟ್ಟು ಹಾಗೂ ಪುರಂದರ ಮಲ್ಪೆ ಇವರು ಪಣಂಬೂರು ಕಿನಾರೆಯಲ್ಲಿ ರಚಿಸಿದ ಆಕರ್ಷಕ ಮರಳುಶಿಲ್ಪ ಸಾರ್ವಜನಿಕರ ಹಾಗೂ ಪ್ರವಾಸಿಗರ ಮನಸೂರೆಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News