×
Ad

ಮಂಗಳೂರು | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Update: 2025-05-10 13:31 IST

ಮಂಗಳೂರು : ಮುನವ್ವಿರುಲ್ ಇಸ್ಲಾಂ ಜಮಾಅತ್ ಗಲ್ಫ್ ಕಮಿಟಿ ಎಂಐಜೆಜಿಸಿ ಪೆರಾಜೆ ವತಿಯಿಂದ ಗಲ್ಫ್ ಮೀಟ್ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮೇ 8ರಂದು ಕಲ್ಚೆರ್ಪೆಯಲ್ಲಿ ನಡೆಯಿತು.

ಪೆರಾಜೆ ಜಮಾಅತ್ ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಎಸೆಸೆಲ್ಸಿ, ಪಿಯುಸಿ ಮತ್ತು ಮದ್ರಸದ ಹತ್ತನೇ ತರಗತಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿದಾ ಎಸ್., ಅನಂ ಎ., ಬಿ.ಟಿ.ಮರಿಯಮ್ ಅಫ್ರಾ(ಎಸೆಸೆಲ್ಸಿ) , ಆಯಿಷತ್ ಇಫಾ, ಅಫ್ರಾ ಫಾತಿಮ ಎ, ಆಮಿನ ಖುರತ್ ಐನಾ(ದ್ವಿತೀಯ ಪಿಯುಸಿ), ಫಾತಿಮತ್ ಶಿದಾ ಹಾಗೂ ಫಾತಿಮತ್ ಇರ್ಷಾನ ( ಮದ್ರಸದ ಹತ್ತನೇ ತರಗತಿ) ಇವರನ್ನು ಜಮಾಅತ್‌ನ ಗಲ್ಫ್ ಕಮಿಟಿಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಪೆರಾಜೆ ಖತೀಬ್ ಉಸ್ತಾದ್ ಯೂಸುಫ್ ಕಾಮಿಲ್ ಸಖಾಪಿ ಉಸ್ತಾದ್, ಪೆರಾಜೆ ಮುಅಹಝ್ಝೀನ್ ಅಶ್ರಫ್ ಅಹ್ಸನಿ ಅನ್ವರಿ ಉಸ್ತಾದ್ ರವರ ದುವಾ ನೆರವೇರಿಸಿದರು. ಹಮೀದ್ ಎಂಐ ಅಧ್ಯಕ್ಷತೆ ವಹಿಸಿದ್ದರು.

ರಿಯಾದ್ ಸಅದಿ ಉಸ್ತಾದ್ ರವರು ಕಿರಾತ್ ಪಠಿಸಿದರು. ಹುಝೈಫ ಪೆರಾಜೆ ಸ್ವಾಗತಿಸಿದರು. ಅಬ್ದುಲ್ ಸಲಾಂ ಕಡಮಕ್ಕಲ್ ಶುಭ ಹಾರೈಸಿದರು. ಗಲ್ಫ್ ಕಮಿಟಿ ಕಾರ್ಯದರ್ಶಿ ಝಾಹಿರ್ ಪೆರಾಜೆ ಆನ್‌ಲೈನ್ ವಂದಿಸಿದರು. ಕಾರ್ಯಕ್ರಮದಲ್ಲಿ ಗಲ್ಫ್ ಕಮಿಟಿ ಸದಸ್ಯರಾದ ಜಮಾಲ್, ಅಶ್ರಫ್ ಗುರುಂಪು, ಆರಿಸ್ ಆಚು, ತಾಹಿರ್ ಅಹದ್, ನೂರುದ್ದೀನ್, ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News