ಮಂಗಳೂರು: ಟಿ.ಆರ್.ಎಫ್. ಮೊಬೈಲ್ ಟೆಕ್ನಿಶಿಯನ್ ಕೋರ್ಸ್ ಸರ್ಟಿಫಿಕೆಟ್ ವಿತರಣೆ ಕಾರ್ಯಕ್ರಮ
ಮಂಗಳೂರು, ಜು.31: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(TRF) ವತಿಯಿಂದ ನಡೆಸಲ್ಪಡುವ ಮೊಬೈಲ್ ಟೆಕ್ನಿಶಿಯನ್ ಕೋರ್ಸನ್ನು ಪೂರ್ಣಗೊಳಿಸಿದ 41ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ವಿತರಣೆ ಹಾಗೂ 42ನೇ ಬ್ಯಾಚ್ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಪ್ರೆಸ್ಟೇಜ್ ಎಂಟರ್ ಪ್ರೈಸಸ್ ಮಾಲಕ ಶಂಸುದ್ದೀನ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೆಲ್ಕಾರ್ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ಲತೀಫ್, ಅರ್ಹ ಯುವಕರಿಗೆ ಸಮಾಜದಲ್ಲಿ ಸ್ವಾವಲಂಬಿ ಬದುಕು ರೂಪಿಸಲು ಟ್ಯಾಲೆಂಟ್ ಸಂಸ್ಥೆ ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಎಫ್.ಡಿ.ಎ. ಸರಕಾರಿ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ ಬಂಟ್ವಾಳ್ ಇದರ ಹಮೀದ್ ಡಿ., ಆಝಾದ್ ವುಡ್ ಇಂಡಸ್ಟ್ರೀಟ್ ಮಾಲಕ ಇಬ್ರಾಹೀಂ ಹಾಜಿ, ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರ್ ಸ್ವಾಗತಿಸಿದರು. ಮೊಬೈಲ್ ಕೋರ್ಸು ವಿದ್ಯಾರ್ಥಿ ಅಬೂಬಕರ್ ಝಿರಾರ್ ಫೈಝಿ ಕಿರಾಅತ್ ಪಠಿಸಿದರು. ನಾಝಿಕ್ ಬಜಾಲ್ ಸರ್ಟಿಫಿಕೆಟ್ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಮೊಬೈಲ್ ಟೆಕ್ನಿಶಿಯನ್ ಶಿಕ್ಷಕ ಯಾಸಿರ್ ಅರಾಫತ್ ವಂದಿಸಿದರು. ಡಿ.ಅಬ್ದುಲ್ ಹಮೀದ್ ಕಣ್ಣೂರ್ ಕಾರ್ಯಕ್ರಮ ನಿರೂಪಿಸಿದರು.