×
Ad

ಯುಐ ಗ್ರೀನ್ ಮೆಟ್ರಿಕ್ ನಲ್ಲಿ ಮಂಗಳೂರು ವಿವಿಗೆ ಭಾರತದ ಅತ್ಯಂತ ಸುಸ್ಥಿತ ವಿಶ್ವವಿದ್ಯಾನಿಲಯವಾಗಿ 3ನೇ ಸ್ಥಾನ

Update: 2026-01-15 13:28 IST

ಮಂಗಳೂರು, ಜ.15: ಇಂಡೋನೇಷ್ಯಾ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದ ಯುಐ ಗ್ರೀನ್ ಮೆಟ್ರಿಕ್ ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕಗಳ ಪ್ರಕಾರ, ಮಂಗಳೂರು ವಿಶ್ವವಿದ್ಯಾನಿಲಯವು 2025ರಲ್ಲಿ ಭಾರತದ 3ನೇ ಅತ್ಯಂತ ಸುಸ್ಥಿರ ವಿಶ್ವವಿದ್ಯಾನಿಲಯ ಸ್ಥಾನ ಪಡೆದಿದೆ. ವಿಶ್ವದಲ್ಲಿ 127ನೇ ಸ್ಥಾನದಲ್ಲಿದೆ.

ಗ್ರೀನ್ ಮೆಟ್ರಿಕ್ ಶ್ರೇಯಾಂಕವು ಹಸಿರು ಕ್ಯಾಂಪಸ್ ಮತ್ತು ಪರಿಸರ ಸುಸ್ಥಿರತೆಯನ್ನು ಆಧರಿಸಿದೆ. ಪರಿಸರಕ್ಕೆ ವಿಶ್ವವಿದ್ಯಾನಿಲಯದ ಬದ್ಧತೆ ಮತ್ತು ಸುಸ್ಥಿರತೆಯ ಕಡೆಗೆ ಏಳು ಉಪಕ್ರಮಗಳನ್ನು ಆಧರಿಸಿ ಈ ಶ್ರೇಯಾಂಕವನ್ನು ನೀಡಲಾಗುತ್ತದೆ.

ಭಾರತದ 100 ವಿಶ್ವವಿದ್ಯಾನಿಲಯಗಳು ವಿಶ್ವಾದ್ಯಂತ 105 ದೇಶಗಳಲ್ಲಿ 1745 ಸಂಸ್ಥೆಗಳು ಈ ಶ್ರೇಯಾಂಕದಲ್ಲಿ ಭಾಗವಹಿಸಿದ್ದವು.

ಮಂಗಳೂರು ವಿಶ್ವವಿದ್ಯಾನಿಲಯವು ವ್ಯವಸ್ಥೆ ಮತ್ತು ಮೂಲಸೌಕರ್ಯದಲ್ಲಿ ದೇಶದಲ್ಲಿ ಒಂದನೇ ಸ್ಥಾನದಲ್ಲಿದೆ. ಇಂಧನ ಮತ್ತು ಹವಾಮಾನ ಬದಲಾವಣೆಯಲ್ಲಿ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ನೀರಿನ ವ್ಯವಸ್ಥೆಗಾಗಿ 6ನೇ ಸ್ಥಾನ ಶಿಕ್ಷಣ ಮತ್ತು ಸಂಶೋಧನೆಗಾಗಿ ದೇಶದಲ್ಲಿ 10ನೇ ಹಾಗೂ ಸಾರಿಗೆ ವ್ಯವಸ್ಥೆಗಾಗಿ ದೇಶದಲ್ಲಿ 11ನೇ ಸ್ಥಾನದಲ್ಲಿದೆ.

ವಿಶ್ವವಿದ್ಯಾನಿಲಯದ ಈ ಸಾಧನೆಗಾಗಿ ಎಲ್ಲಾ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News