×
Ad

ಮಂಗಳೂರು: ಕೋರ್ಡೆಲ್ ಚರ್ಚ್ ಆ್ಯಪ್ ಅನಾವರಣ

Update: 2023-09-18 14:44 IST

ಮಂಗಳೂರು, ಸೆ.18: ಕುಲಶೇಖರದ ಕೋರ್ಡೆಲ್ ಚರ್ಚ್ (ಹೋಲಿ ಕ್ರಾಸ್)ನ ಶತಮನೋತ್ತರ ಸುವರ್ಣ ಮಹೋತ್ಸವವು ರವಿವಾರ ನಡೆಯಿತು. ಈ ಸಂದರ್ಭ ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ.ಫಾ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಚರ್ಚಿನ 150ರ ನೆನಪಿಗಾಗಿ ಹೊಸ ಆ್ಯಪ್ ಅನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಈ ಆ್ಯಪ್ ನಲ್ಲಿ ಚರ್ಚಿನ ಎಲ್ಲಾ ವಿಷಯಗಳು ಹಾಗೂ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದರು.

ಈ ಸಂದರ್ಭ ಚರ್ಚಿನ ಪ್ರಧಾನ ಧರ್ಮಗುರು ವಂ.ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಚರ್ಚಿನ ಸಹಾಯಕ ಗುರು ವಂ.ಫಾ. ಐವನ್ ಕೊರ್ಡೆರೊ, ವಂ. ಫಾ, ಪಾವ್ಲ್ ಡಿಸೋಜ, ವಲಯದ ಗಾರ್ವಾರ್ ವಂ.ಫಾ. ಜೇಮ್ಸ್ ಡಿಸೋಜ, ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸಿಲ್ವಿಯಾ ರೂತ್ ಕ್ಯಾಸ್ಟಲಿನೋ, ಸಿ. ಕ್ಯಾರಿಸಿಮಾ, 21 ಆಯೋಗಗಳ ಮುಖ್ಯಸ್ಥ ಡೊಲ್ಪಿಡಿಸೋಜ, ಸಿಟಿ ಹಾಗೂ ಆ್ಯಪ್ ತಯಾರಿಕೆಯಲ್ಲಿ ಸಹಕರಿಸಿದ ಪ್ರವೀಣ್ ತಾವ್ರೊ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News