×
Ad

ಮಂಗಳೂರು | ಕಂದಕ್‌ ಗಲ್ಲಿ ಪ್ರೀಮಿಯರ್ ಲೀಗ್ : ಆಟಗಾರರ ಹರಾಜು ಪ್ರಕ್ರಿಯೆ

Update: 2025-12-17 11:32 IST

ಮಂಗಳೂರು : ಕಂದಕ್‌ ಗಲ್ಲಿ ಪ್ರೀಮಿಯರ್ ಲೀಗ್ ಐದನೇ ಆವೃತ್ತಿ ಡಿ.26 ರಿಂದ ಜ.4 ರವರೆಗೆ ನಡೆಯಲಿದ್ದು, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಅತ್ತಾವರದ ರಾಯಲ್ ಪ್ಲಾಜಾದಲ್ಲಿ ನಡೆಯಿತು.

ಹರಾಜಿನಲ್ಲಿ 42 ಆಟಗಾರರು ಹೆಸರು ನೋಂದಾಯಿಸಿದ್ದು, ನಿಯಾಜ್ ಮುರ್ಶಾದ್ ಈ ಬಾರಿಯ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಖರೀದಿಯಾದರು. ಉಳಿದಂತೆ ಮುಕ್ತಾರ್ ಕೆ., ಮುಹಮ್ಮದ್ ರಿಲ್ವಾನ್, ಅನ್ಸಾಫ್, ಮುಹಮ್ಮದ್ ಅನ್ವಾಝ್, ಇಬ್ರಾಹಿಂ ಶಕೀಬ್, ಜಾಫರ್ ಸಾಧಿಕ್, ದುಬಾರಿ ಮೊತ್ತದಲ್ಲಿ ಖರೀದಿಯಾದರು.

ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಫ್ರಾಂಚೈಸಿಗಳಾದ ಅಫ್ತಾಬ್ ಬೋಳಾರ್ ಮಾಲಕತ್ವದ ಕಂದಕ್ ಬುಲ್ಸ್, ಮುಹಮ್ಮದ್ ಅಶ್ರಫ್ ಮಾಲಿಕತ್ವದ ಕಂದಕ್ ನೈಟ್ ರೈಡರ್, ದಾವೂದ್ ಹಕೀಂ ನೇತೃತ್ವದ ಕಂದಕ್ ವಾರಿಯರ್ಸ್‌, ಯಹ್ಯಾ ಮಾಲಕತ್ವದ ಕಂದಕ್ ಸೂಪರ್ ಕಿಂಗ್ಸ್‌, ಮುಝಫರ್ ಮಾಲಕತ್ವದ ಕಂದಕ್ ಯುನೈಟೆಡ್, ಹಾಗೂ ಮುಹಮ್ಮದ್ ಯೂಸುಫ್ ಮೋಶಿನ್ ನೇತೃತ್ವದ ರಾಯಲ್ ಕಂದಕ್ ತಂಡಗಳು ಈ ಬಾರಿಯ ಹರಾಜಿನಲ್ಲಿ ಭಾಗವಹಿಸಿತು.

ಸತತ ಎರಡು ಬಾರಿಯ ಚಾಂಪಿಯನ್ಸ್ ತಂಡ ಕಂದಕ್ ಸೂಪರ್ ಕಿಂಗ್ಸ್ ಮುಹಮ್ಮದ್ ಫಾಝಿಲ್ ಮತ್ತು ನಿಯಾಝ್‌ ಮುರ್ಶಾದ್ ರವರನ್ನು ಹರಾಜಿನಲ್ಲಿ ಪೈಪೋಟಿ ನೀಡಿ ತಂಡ ಈ ಎರಡೂ ಆಟಗಾರರನ್ನು ಪಡೆಯಲು ಯಶಸ್ವಿಯಾಯಿತು.

ಕಳೆದ ಎರಡು ಬಾರಿ ಫೈನಲ್ ಎಡವಿದ ಕಂದಕ್ ವಾರಿಯರ್ಸ್‌ ಮತ್ತೆ ಈ ಬಾರಿ ಫೈನಲ್ ಧಾವಿಸಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಕಂದಕ್ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಉಳಿದ ನಾಲ್ಕು ತಂಡ ಮೊದಲ ಬಾರಿ ಪ್ರಶಸ್ತಿ ಪಡೆಯುತ್ತೋ? ಕಾದು ನೋಡಬೇಕಾಗಿದೆ.

ಕಾರ್ಯಕ್ರಮದಲ್ಲಿ ರಾವ್ ಆ್ಯಂಡ್ ಬ್ರದರ್ಸ್ ಮಾಲಕರಾದ ಶಿವಾನಂದ ರಾವ್, ಸಚಿನ್ ರಾವ್, ಉದ್ಯಮಿಗಳಾದ ಶರೀಫ್, ಸತ್ತಾರ್, ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಧ್ಯಕ್ಷರು, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್, ಬುರ್ಖಾ ಫ್ಯಾಶನ್ ಮಾಲಕರಾದ ರಿಯಾಝ್‌, ಕಮಲ್ ವಿಡಿಯೋ ಮಾಲಕರಾದ ಕಮಲಕ್ಷಾ ಜೆ., ಉಪಸ್ಥಿತರಿದ್ದರು. ಹರಾಜು ಪ್ರಕ್ರಿಯೆಯನ್ನು ನೀರಸವಾಗಿ ರಾಬಿನ್ ಎಮ್ಮೆಕರೆ ನೆರವೇರಿಸಿದರು.

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News