×
Ad

ಮಂಗಳೂರು: ಮಂಗಳವಾರವೂ ಮುಷ್ಕರ ನಡೆಸಿದ ಬಿಸಿಯೂಟ ನೌಕರರು

Update: 2025-12-02 21:33 IST

ಮಂಗಳೂರು: ಮಾತೆ ಮಾತೆ ಎನ್ನುತ್ತಾ ಗೋವನ್ನು ಕಡಿದು ಗೋಮಾಂಸ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಸಿಬ್ಬಂದಿಯರನ್ನೂ ಮಾತೆ ಮಾತೆ ಎನ್ನುತ್ತಾ ಸಂಬಳ ನೀಡದೆ ನಮ್ಮ ದೇಹದಲ್ಲಿ ರಕ್ತ, ಮಾಂಸ ಇಲ್ಲದಂತೆ ಮಾಡಿ ಅವರ ಬದುಕನ್ನೇ ನಾಶ ಮಾಡುತ್ತಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.

ನಗರದ ಕ್ಲಾಕ್ ಟವರ್ ಮುಂದೆ ಬಿಸಿಯೂಟ ತಯಾರಕರ ಸಂಬಳ ಏರಿಕೆ, ಕೆಲಸದ ಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಹೋರಾಟದ ಎರಡನೇ ದಿನದ ಧರಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಕಳೆದ 2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಕನಿಷ್ಟ ಸಂಬಳವನ್ನೂ ಏರಿಸದಿರುವುದು ಯಾವ ಸೀಮೆಯ ಬೇಟಿ ಬಚಾವೋ ಎಂದು ಪ್ರಶ್ನಿಸಿದ ಅವರು ಕೇರಳ ಸರಕಾರ ಬಿಸಿಯೂಟ ಸಿಬ್ಬಂದಿಗಳಿಗೆ ದಿನಕ್ಕೆ 600 ರೂ. ಸಂಬಳ ನೀಡುತ್ತಿದ್ದರೂ ಈ ಬಿಜೆಪಿ, ಕಾಂಗ್ರೆಸ್ ಸರಕಾರಗಳಿಗೆ ಯಾಕೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಿ.ಕೆ. ಇಮ್ತಿಯಾಝ್ ಅಕ್ಷರ ದಾಸೋಹ ಸಂಘದ ಕಡಬ ತಾಲೂಕು ಕಾರ್ಯದರ್ಶಿ ಸುಲೋಚನ, ಡಿವೈಎಫ್‌ಐ ಮುಖಂಡ ಅಭಿಷೇಕ್ ಬೆಳ್ತಂಗಡಿ ಮಾತಾಡಿದರು.

ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ರಂಜಿತ, ಕಾರ್ಯದರ್ಶಿ ಲತಾ, ಬೆಳ್ತಂಗಡಿ ತಾಲೂಕು ನಾಯಕಿಯರಾದ ಸುನೀತಾ, ವಿನೋದ, ಜಾನಕಿ ಸಿಐಟಿಯು ಮುಖಂಡರಾದ ಪ್ರಮೋದಿನಿ, ಅಕ್ಷರ ದಾಸೋಹ ಸಂಘದ ಮುಖಂಡರಾದ ಬಬಿತ, ಝರೀನ, ರೇಖಾ, ಭವಾನಿ, ಮಮತ, ಹೇಮಲತ ಕಡಬ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News