×
Ad

ಎಸ್‌ವೈಎಸ್ ಉಪ್ಪಿನಂಗಡಿ ರೋನ್ ವತಿಯಿಂದ ಜಮಾಅತ್ ಪ್ರತಿನಿಧಿ ಸಂಗಮ

Update: 2025-12-24 20:22 IST

ಉಪ್ಪಿನಂಗಡಿ, ಡಿ.24: ರಾಜ್ಯದ ಅತೀ ದೊಡ್ಡ ಸುನ್ನೀ ಯುವಜನ ಸಂಘಟನೆಯಾಗಿರುವ ಎಸ್‌ವೈಎಸ್ ಉಪ್ಪಿನಂಗಡಿ ಝೋನ್ ಸಮಿತಿ ವತಿಯಿಂದ ಖುತುಬಾಅ ಹಾಗೂ ಜಮಾಅತ್ ಪ್ರತಿನಿಧಿ ಸಂಗಮವು, ಎಸ್ ವೈ ಎಸ್ ಝೋನ್ ಸಮಿತಿ ಅಧ್ಯಕ್ಷ ಅಬ್ದುರ‌್ರಝಾಖ್ ಲತೀಫಿ ಕುಂತೂರು ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿ ಎಸ್‌ಜೆಎಂ ಜಿಲ್ಲಾ ಮುಅಲ್ಲಿಂ ಸೆಂಟರ್ ಸಭಾಂಗಣದಲ್ಲಿ ಜರಗಿತು.

ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ನಾವೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿಂದು ಮದುವೆಯ ಹೆಸರಲ್ಲಿ ಅನಗತ್ಯವಾಗಿ ನಡೆಯುತ್ತಿರುವ ದುಂದು ವೆಚ್ಚ ಹಾಗೂ ಅನಾಚಾರದಿಂದ ದೂರವಿರುವಂತೆ ನಮ್ಮ ಯುವಕ ಯುವತಿಯರಿಗೆ ಜಮಾಅತ್ ನಾಯಕರು ಸ್ಪಷ್ಟ ಸಂದೇಶ ನೀಡಿ, ಸರಳ ಮಾದರಿ ಮದುವೆಗೆ ಪ್ರೇರಣೆ ನೀಡಬೇಕೆಂದು ಕರೆ ನೀಡಿದರು.

ಕೆ.ಎಂ.ಜೆ ಜಿಲ್ಲಾಧ್ಯಕ್ಷ ಜಿ ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಜಂ-ಇಯ್ಯತುಲ್ ಉಲಮಾ ಕೇಂದ್ರ ಸಮಿತಿ ನಾಯಕ ಆದಂ ಅಹ್ಸನಿ ಉಸ್ತಾದರು ದುಆ ನೆರವೇರಿಸಿದರು.

ವೇದಿಕೆಯಲ್ಲಿ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು, ಅಥಾವುಲ್ಲ ಹಿಮಮಿ ಸಖಾಫಿ, ಹಮೀದ್ ಸಅದಿ ಕಳಂಜಿಬೈಲು, ಕಾಸಿಂ ಪದ್ಮುಂಜ, ಅಬ್ಬಾಸ್ ಬಟ್ಲಡ್ಕ, ಉಸ್ಮಾನ್ ಸೋಕಿಲ, ಅಬ್ದುಲ್ ಮಜೀದ್ ಸಖಾಫಿ, ಡಿ.ಎಚ್.ಇಬ್ರಾಹೀಂ ಸಅದಿ, ಮುಹಮ್ಮದ್ ಅಲಿ ತುರ್ಕಳಿಕೆ, ಇಸ್ಹಾಕ್ ಹಾಜಿ ಮೇದರಬೆಟ್ಟು, ಅಬ್ದುಲ್ ಶುಕೂರ್ ಮೇದರಬೆಟ್ಟು, ಮುಹಮ್ಮದ್ ಫಾಳಿಲಿ, ಜಿ ಎಂ ಕುಂಞಿ ಜೋಗಿಬೆಟ್ಟು, ರಫೀಕ್ ಬಾಜಾರ, ನಿಸಾರ್ ಸೋಕಿಲ, ಕಲಂದರ್ ಪದ್ಮುಂಜ ಸೇರಿದಂತೆ ಝೋನ್ ವ್ಯಾಪ್ತಿಯ 40 ಕ್ಕೂ ಅಧಿಕ ಜಮಾಅತಿನ ಖತೀಬ್ ಉಪಸ್ಥಿತರಿದ್ದರು.

ಎಸ್ ವೈ ಎಸ್ ಉಪ್ಪಿನಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲು ಸ್ವಾಗತಿಸಿ ದರು. ಎಸ್‌ವೈ ಎಸ್ ಝೋನ್ ಕೋಶಾಧಿಕಾರಿ ಡಾ.ಫಾರೂಕ್ ನೆಕ್ಕಿಲಾಡಿ ವಂದಿಸಿದರು.






 


 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News