ಮಂಗಳೂರು | 45 ವರ್ಷ ಖತೀಬ್‌ರಾಗಿ ಸೇವೆ ಸಲ್ಲಿಸಿದ ಸ್ವಾಲಿಹ್ ಉಸ್ತಾದ್‌ಗೆ ಸಿಟಿ ಕಮಿಟಿಯಿಂದ ಸನ್ಮಾನ
ಮಂಗಳೂರು : ಬಂದರ್ ಕಸೈಗಲ್ಲಿ ಮಸೀದಿಯಲ್ಲಿ ಸುಧೀರ್ಘ 45 ವರ್ಷಗಳ ಕಾಲ ಖತೀಬ್‌ರಾಗಿ ಸೇವೆ ಸಲ್ಲಿಸಿದ ಹಾಜಿ.ಸಿ.ಸ್ವಾಲಿಹ್ ಮುಸ್ಲಿಯಾರ್ ಉಸ್ತಾದ್ ಅವರನ್ನು ಅವರ ಸ್ವಗೃಹದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್ ವೈ ಎಸ್ ,ಎಸ್ ಎಸ್ ಎಫ್ ಮಂಗಳೂರು ಸಿಟಿ ಯುನಿಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಒಂದೇ ಮಸೀದಿಯಲ್ಲಿ ಜೀವನದ ಬಹುತೇಕ ಜೀವಿತ ಕಾಲವನ್ನು ದೀನಿ ಸೇವೆಗಾಗಿ ಮುಡಿಪಾಗಿಟ್ಟ ಸ್ವಾಲಿಹ್ ಉಸ್ತಾದ್ ರ ಬಗ್ಗೆ ಕಂಡತ್ ಪಳ್ಳಿ ಜುಮಾ ಮಸೀದಿ ಖತೀಬ್ ಪಿ.ಎ.ಮುಹಮ್ಮದ್ ರಫೀಕ್ ಮದನಿ ಕಾಮಿಲ್, ಫೌಝೀ ಲೈನ್ ಮಸೀದಿ ಖತೀಬ್ ಅಬುಲ್ ವಫಾ ಖಾಸಿಂ ಮುಸ್ಲಿಯಾರ್, ಎಸ್ ವೈ ಎಸ್ ಮಂಗಳೂರು ಝೋನ್ ಅಧ್ಯಕ್ಷ ಹಾಫಿಳ್ ಯಾಕುಬ್ ಸ ಅದಿ ನಾವೂರು ಅವರು ಮಾತಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಮುಸ್ಲಿಂ ಜಮಾಅತ್ ಸಿಟಿ ಸಮಿತಿ ನಾಯಕರಾದ ರಷೀದ್ ಹಾಜಿ ಪಾಂಡೆಶ್ವರ, ಅಬ್ಬಾಸ್ ಹಾಜಿ ಬಿಜೈ, ಜೆಪ್ಪು ಅಬೂಬಕ್ಕರ್ ಹಾಜಿ, ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿಗಳಾದ ನಝೀರ್ ಲುಲು, ಹಸನ್ ಪಾಂಡೇಶ್ವರ, ಸಿಟಿ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಟೈಲರ್, ಝೋನ್ ನಾಯಕರಾದ ಕೆ.ಸಿ.ಎಣ್ಮೂರು, ಹಾರಿಸ್ ಮದನಿ, ಮಜೀದ್ ಸಅದಿ, ಮನ್ಸೂರ್ ಸಅದಿ, ಶರೀಫ್ ಝುಹ್ರಿ ಲೈನ್, ಸಪ್ವಾನ್ ಬಿಜೈ, ರಶೀದ್ IBM, ರಫೀಕ್ ನೂಜಿ ಉಪಸ್ಥಿತರಿದ್ದರು.