×
Ad

ಮಂಗಳೂರು : ಮೊಬೈಲ್ ನೋಡುತ್ತಲೇ ಬಸ್ ಚಲಾಯಿಸಿದ ಚಾಲಕ

Update: 2023-07-23 20:55 IST

ಮಂಗಳೂರು, ಜು.23: ನಗರದ ಸ್ಟೇಟ್‌ಬ್ಯಾಂಕ್‌ನಿಂದ ತಲಪಾಡಿ ನಡುವೆ ಚಲಿಸುವ ರೂಟ್ ನಂಬ್ರ 43ರ ಖಾಸಗಿ ಸಿಟಿ ಬಸ್ಸೊಂದರ ಚಾಲಕನೊಬ್ಬ ಒಂದು ಕೈಯಲ್ಲಿ ಮೊಬೈಲ್ ಹಿಡಿದು ನೋಡುತ್ತಲೇ ಇನ್ನೊಂದು ಕೈಯಿಂದ ಸ್ಟೇರಿಂಗ್ ತಿರುಗಿಸುತ್ತಾ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಸ್‌ನಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎನ್ನಲಾಗಿದೆ. ನಿರ್ಲಕ್ಷ್ಯತನದ ಚಾಲನೆಯನ್ನು ಪ್ರಯಾಣಿಕರೊಬ್ಬರು ವೀಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಾಲಕನ ಬೇಜವಾಬ್ದಾರಿ ವರ್ತನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News