×
Ad

ಮಂಗಳೂರು| ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಆರೋಪ: ಇಬ್ಬರ ಬಂಧನ

Update: 2025-10-17 20:47 IST

ಮಂಗಳೂರು, ಅ.17: ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಮಾಡಿದ ಆರೋಪದಲ್ಲಿ ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಶಾಂತಿನಗರದ  ಅನ್ವರ್ (44) ಮತ್ತು ತಾಯಿರ ನಕಾಶ್ (42) ಎಂಬವರನ್ನು ಮುಲ್ಕಿ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಅ.15ರಂದು ಈ ಆರೋಪಿಗಳು ಬ್ಯಾರಿ ಭಾಷೆಯಲ್ಲಿ ಒಂದು ಗ್ಯಾಂಗ್ ಇದೆ. ಯಾರು ಕ್ಯಾರ್ಲೆಸ್ ಮಾಡಬೇಡಿ. ಬಜಪೆ, ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಬಜಪೆ, ಸುರತ್ಕಲ್‌ನ ಜನರು ಮಾತ್ರವಲ್ಲ ಕಿನ್ನಿಗೋಳಿಯವರು ಕ್ಯಾರ್‌ಫುಲ್ ಆಗಿರಬೇಕು ಇತ್ಯಾದಿಯಾಗಿ ಸಂದೇಶ ರವಾನಿಸಿದ್ದಾರೆ. ಸಮಾಜದಲ್ಲಿ ಕೋಮುಗಲಭೆ ಆಗುವಂತಹ ಈ ಸಂದೇಶವನ್ನು ವಾಟ್ಸ್‌ಆ್ಯಪ್ ಮೂಲಕ ರವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗಾಗಿ ಇಂತಹ ಆಂತಕಕಾರಿ ಸಂದೇಶಗಳ ಬಗ್ಗೆ ಸಾರ್ವಜನಿಕರು ಗಮನ ಕೊಡಬಾರದು ಮತ್ತು ಇಂತಹ ಸಂದೇಶಗಳನ್ನು ಶೇರ್ ಮಾಡದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News