×
Ad

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ; ಇಬ್ಬರ ಬಂಧನ

Update: 2024-02-09 20:55 IST

ಮಂಗಳೂರು: ನಗರ ಹೊರವಲಯದ ಬೋಂದೆಲ್ ಸಾರ್ವಜನಿಕ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಗರದ ಹಿಮ ನೀಶ್ (26) ಮತ್ತು ಕೋಟೆಕಾರ್ ಪವನ್‌ರಾಜ್ ಪಿ. (28) ಎಂದು ಗುರುತಿಸಲಾಗಿದೆ.

ಆರೋಪಿಗಳು ಸುಮಾರು 19 ಗ್ರಾಂ ತೂಕದ 57,000 ರೂ. ಮೌಲ್ಯದ ಮೆಥಪಟೈನ್ ಎಂಬ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉತ್ತರ ಉಪ ವಿಭಾಗದ ಆ್ಯಂಟಿ ಡ್ರಗ್ಸ್ ಸ್ಕ್ವಾಡ್ ದಾಳಿ ನಡೆಸಿ ಬಂಧಿಸಿತಲ್ಲದೆ ಮೊಬೈಲ್, ಬೈಕ್ ಸಹಿತ ಗಾಂಜಾ ವಶಪಡಿಸಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News