×
Ad

ಮಂಜನಾಡಿ| ಗ್ಯಾಸ್ ದುರಂತಕ್ಕೆ ಮತ್ತೋರ್ವ ಬಾಲಕಿ ಬಲಿ; ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Update: 2024-12-28 16:58 IST

ಫೈಲ್‌ ಫೋಟೊ 

ಉಳ್ಳಾಲ: ಗ್ಯಾಸ್ ಸೋರಿಕೆ ಪರಿಣಾಮ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮತ್ ಮಾಯಿಝ (9) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಡಿಸೆಂಬರ್ 8ರಂದು ಮಂಜನಾಡಿ ಗ್ರಾಮದ ಖಂಡಿಕ ನಿವಾಸಿಯಾಗಿದ್ದ ಮುತ್ತಲಿಬ್ ಅವರ ಮನೆಯಲ್ಲಿ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಈ ಸಂದರ್ಭ ಮುತ್ತಲಿಬ್ ಅವರ ಪತ್ನಿ ಖುಬ್ರಾ ಮತ್ತು ಮಕ್ಕಳಾದ ಝುಲೈಕ ಮೆಅದಿಯಾ, ಮಾಝಿಯಾ ಮತ್ತು ಮಾಯಿದಾ ಕೊಠಡಿಯಲ್ಲಿ ಮಲಗಿದ್ದರು. ಸ್ಫೋಟದ ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ಘಟನೆಯಲ್ಲಿ ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮುತ್ತಲಿಬ್ ಅವರ ಪತ್ನಿ ಖುಬ್ರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿ.13ರಂದು ಮೃತಪಟ್ಟಿದ್ದರು. ಕಳೆದ ಗುರುವಾರ ಹಿರಿಯ ಮಗಳು ಝುಲೈಕ ಮೆಅದಿಯ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಮಾಯಿದಾ ಚಿಕಿತ್ಸೆ ಗೆ ಸ್ಪಂದಿಸಿ ಗುರುವಾರ ಬಿಡುಗಡೆ ಆಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮತ್ ಮಾಯಿಝ ಶನಿವಾರ ಮೃತಪಟ್ಟಿದ್ದಾಳೆ. ಮೊಂಟೆಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಆಗಿದ್ದಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News