ಮಂಜನಾಡಿ | ಮಸೀದಿ ಕಚೇರಿ ಉದ್ಘಾಟನೆ, ವಸತಿ ಸಮುಚ್ಚಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ
ಮಂಜನಾಡಿ : ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ದರ್ಸ್ ಆರಂಭಿಸಿದ ಕಾರಣದಿಂದಾಗಿ ಅಭಿವೃದ್ಧಿ ಹೊಂದಿದ್ದು, ಇಲ್ಲಿನ ಜನರಿಗೆ ಅನುಕೂಲಕರವಾಗಿ ನೂತನ ಮಸೀದಿ ನಿರ್ಮಾಣವಾಗಬೇಕು ಎಂದು ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯ ಗೌರವ ಅಧ್ಯಕ್ಷರಾದ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಹೇಳಿದರು.
ಅವರು ಮಂಜನಾಡಿ ಮಸೀದಿ ವಠಾರದಲ್ಲಿ ನಡೆದ ಕೇಂದ್ರ ಜುಮ್ಮಾ ಮಸೀದಿಯ ಕಚೇರಿ ಹಾಗೂ ಮಸೀದಿ ಅಧೀನದಲ್ಲಿ ನಿರ್ಮಾಣವಾಗಲಿರುವ ವಸತಿ ಸಮುಚ್ಚಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀಯದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹಾಯಕ ಮುದರ್ರಿಸ್ ಮಸೂದ್ ಸಅದಿ, ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷರಾದ ಆಲಿ ಕುಂಞಿ ಪಾರೆ ಮುನೀರ್ ಬಾವ, ಕೋಶಾಧಿಕಾರಿ ಉಮ್ಮರ್ ಕುಂಞಿ, ಕಾರ್ಯದರ್ಶಿ ಗಳಾದ ಹಮೀದ್ ಆರಂಗಡಿ, ಬಾಪಕುಂಞಿ, ಕುಂಞಿ ಬಾವ ಕಟ್ಟೆಮಾರ್, ಸಮಿತಿ ಸದಸ್ಯರಾದ ಎ.ಎಂ.ಇಬ್ರಾಹಿಂ, ಇಬ್ರಾಹಿಂ ಅಹ್ಸನಿ, ಟಿ.ಮುಹಮ್ಮದ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.