ಮೀಫ್ ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾಟ: ನೋಬೆಲ್ ಸ್ಕೂಲ್ ಕುಂಜತ್ತಬೈಲ್ ವಿನ್ನರ್ಸ್, ಅನ್ಸಾರ್ ಸ್ಕೂಲ್ ಬಜ್ಪೆ ರನ್ನರ್ಸ್
ಪುತ್ತೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಪುತ್ತೂರು ಮೌಂಟನ್ ವ್ಯೂ ಕ್ರೀಡಾಗಣ ದಲ್ಲಿ ಆಯೋಜಿಸಿದ ಅಂತರ್ ಜಿಲ್ಲಾ ಪ್ರೌಢ ಶಾಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಸಂಪನ್ನಗೊಂಡಿದೆ.
ಸಮಾರೋಪ ಸಮಾರಂಭ ದಲ್ಲಿ ಚಾಂಪಿಯನ್ ಶಿಪ್ ಟ್ರೋಫಿ, ಪದಕ ಮತ್ತು ಪ್ರಶಸ್ತಿ ಪತ್ರ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ವಹಿಸಿದ್ದರು. ರಾಜ್ಯ ವಾಲಿಬಾಲ್ ಸಂಸ್ಥೆ ಅಡ್ ಹಾಕ್ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಬಹುಮಾನ ವಿತರಿಸಿ ಸಮಾರೋಪ ಭಾಷಣ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮುಸ್ತಫ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರ್, ಪಂದ್ಯಾಟದ ಸಂಯೋಜಕ ಶಾರಿಕ್ ಕುಂಜತ್ತಬೈಲ್, ಮೌಂಟನ್ ವ್ಯೂ ಪ್ರಧಾನ ಕಾರ್ಯದರ್ಶಿ ಹಾಜಿ ಯು ಮಹಮ್ಮದ್ ಪಡೀಲ್, ಸಂಚಾಲಕ ಮಹಮ್ಮದ್ ಸಾಬ್, ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಆಝಾದ್, ಅಡ್ವೋಕೇಟ್ ನೋಟರಿ ನೂರುದ್ದೀನ್ ಸಾಲ್ಮರ, ಬಿ. ಕೆ. ಮಾರ್ಟ್ ಮಾಲಕ ಮುಈನ್, ಅಬ್ಬಾಸ್ ದರ್ಬೆ, ಸಯ್ಯದ್ ಆಫೀ ತಂಙಳ್, ಜುನೈದ್ ಸಾಲ್ಮರ, ನೌಫಲ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಅಶ್ರಫ್,ಸಹಾಯಕ ಶಿಕ್ಷಕ ಯೂಸುಫ್, ರವೂಫ್ ತರಬೇತುಧಾರರುಗಳಾದ ಇರ್ಷಾದ್, ರಫೀಕ್, ಜಾನ್ಸನ್ ಮೊದಲಾವರು ಸಹಕರಿಸಿದರು.
ಪಂದ್ಯಾಟದ ಫಲಿತಾಂಶ
ಪ್ರಥಮ: ನೋಬಲ್ ಆಂಗ್ಲ ಮಾಧ್ಯಮ ಶಾಲೆ ಕುಂಜತ್ತೂರ್, ದ್ವಿತೀಯ: ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ ಬಜ್ಪೆ, ಉತ್ತಮ ಆಲ್ ರೌಂಡರ್ ಮಹಮ್ಮದ್ ಮಾಶಿಕ್ ಅನ್ಸಾರ್ ಸ್ಕೂಲ್ ಬಜ್ಪೆ. ಬೆಸ್ಟ್ ಪಾಸರ್ ಮಹಮ್ಮದ್ ರಬೀಬ್ ಹಫೀಝ್ ನೋಬಲ್ ಸ್ಕೂಲ್ ಕುಂಜತ್ತಬೈಲ್, ಬೆಸ್ಟ್ ಅಟ್ಯಾಕರ್ ಮಹಮ್ಮದ್ ಸಮೀರ್ ನೋಬಲ್ ಸ್ಕೂಲ್ ಅವರು ಪಡೆದುಕೊಂಡರು.