ಹಿರಾ ಮಹಿಳಾ ಸಂಯುಕ್ತ ಪಪೂ ಕಾಲೇಜಿನ ವಾರ್ಷಿಕೋತ್ಸವ
ತೊಕ್ಕೊಟ್ಟು, ಡಿ.13: ಬಬ್ಬುಕಟ್ಟೆಯ ಹಿರಾ ಮಹಿಳಾ ಸಂಯುಕ್ತ ಪಪೂ ಕಾಲೇಜಿನ ಇಪ್ಪತ್ತೈದನೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಗುರುವಾರ ಎಂಎಸ್ಎಚ್ಎಂ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಶಾಂತಿ ಪ್ರಕಾಶನದ ಟ್ರಸ್ಟಿ ಸಮೀರಾ ಜಹಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶುಭ ಹಾರೈಸಿದರು. ಜಮಾಅತೆ ಇಸ್ಲಾಂ ಹಿಂದ್ ಸದಸ್ಯೆ ಝೀನತ್ ಹಸ್ನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಫಾತಿಮಾ ಮೆಹರೂನ್ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಉಪನ್ಯಾಸಕಿ ಮಂಜುಳಾ ಕುಮಾರಿ ವಾಚಿಸಿದರು. ಹಿರಾ ವಿಮೆನ್ಸ್ ಕಾಲೇಜಿನ ಪ್ರಾಂಶುಪಾಲೆ ಆಯಿಷಾ ಅಸ್ಮಿನ್, ಹಿರಾ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಆಫ್ರಿನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೀನಾ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಹಾಜಿರಾ ಮತ್ತು ಮೆಹಪೂಜ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ದೀಕ್ಷಾ ಮತ್ತು ಸುಶ್ಮಿತಾ ಬಹುಮಾನಿತರ ಹೆಸರನ್ನು ವಾಚಿಸಿದರು. ನುಹ ಫಾತಿಮಾ ವಂದಿಸಿದರು.