×
Ad

ಮಂಗಳೂರು: ನಾಪತ್ತೆಯಾಗಿದ್ದ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2024-10-19 22:24 IST

ಶಮಾನ್ ಅಲಿ

ಬಜ್ಪೆ: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ MRPL ಅಧೀನ ಸಂಸ್ಥೆ ಒಎಂಪಿಎಲ್ ಕಂಪೆನಿಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಶನಿವಾರ ಒಎಂಪಿಎಲ್ ನ ಒಡಿಸಿ ಗೇಟ್‌ ಬಳಿ ಪತ್ತೆಯಾಗಿದೆ.

ಅಸ್ಸಾಂ ಮೂಲದ ಶಮಾನ್ ಅಲಿ (26) ಮೃತ ಯುವಕ ಎಂದು ತಿಳಿದು ಬಂದಿದೆ.

ಈತನ ಮೃತದೇಹ ತನ್ನ ವಿಸಿಲ್‌ ಗಾರ್ಡನ್ನು ಮರಕ್ಕೆ ಸುತ್ತಿ ನೇಣು ಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ಒಎಂಪಿಎಲ್ ಸುಮಾರು 15 ಅಡಿ ಎತ್ತರದ ಕಾಂಪೌಂಡ್‌ ಹಾರಿ ಸುಮಾರು 300-400 ಮೀಟರ್‌ ದೂರಕ್ಕೆ ನಡೆದು ಬಂದು ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಶಮಾನ್ ಅಲಿ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ MRPL ಅಧೀನ ಸಂಸ್ಥೆ ಒಎಂಪಿಎಲ್ ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದ. ಬೆಳಗ್ಗಿನ ಜಾವ 4 ಗಂಟೆಯ ವರೆಗೆ ಒಎಂಪಿಎಲ್ ನ ಒಳಗೆ ಕೆಲಸದಲ್ಲಿ ನಿರತನಾಗಿರುವುದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು ಬಳಿಕ ನಾಪತ್ತೆಯಾಗಿದ್ದ. ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News